ಸಾಮಾನ್ಯ ವರ್ಗಾವಣೆ ಮಾರ್ಚ್‌ವರೆಗೆ ಇಲ್ಲ
ಬೆಂಗಳೂರು, ನ. 11– ಬರುವ ಫೆಬ್ರುವರಿ– ಮಾರ್ಚ್ ತಿಂಗಳವರೆಗೆ ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆಯನ್ನು ಮಾಡದಿರಲು ಹಾಗೂ ವರ್ಗಾವಣೆ ನೀತಿಗೆ ಕೆಲವು ಬದಲಾವಣೆ ತರಲು ಇಂದು ರಾತ್ರಿ ನಡೆದ ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಸರ್ಕಾರ ಬದಲಾವಣೆಯಾಗಿರುವ ಸಂದರ್ಭದಲ್ಲಿ ಕೂಡಲೇ ಸರ್ಕಾರಿ ನೌಕರರನ್ನು ಸಾರಾಸಗಟಾಗಿ ವರ್ಗಾವಣೆ ಮಾಡಬೇಕೆಂಬ ತೀವ್ರ ಒತ್ತಡ ಆಡಳಿತ ಪಕ್ಷದ ಶಾಸಕರು ಮತ್ತು ಕಾರ್ಯಕರ್ತರಿಂದ ಇದ್ದರೂ ಸಾಮಾನ್ಯ ವರ್ಗಾವಣೆಯನ್ನು ಫೆಬ್ರುವರಿ– ಮಾರ್ಚ್ ತಿಂಗಳವರೆಗೆ ಮುಂದೂಡಲು ಸಂಪುಟ ನಿರ್ಧರಿಸಿದೆ.
ಸಿವಿಲ್ ನ್ಯಾಯಾಧೀಶರಿಗೆ ಏಕರೂಪ ವೇತನ
ನವದೆಹಲಿ, ನ. 11– ರಾಜ್ಯ ನ್ಯಾಯಾಂಗ ಸೇವೆಯ ವ್ಯಾಪ್ತಿಯಲ್ಲಿ ಬರುವ ಸಿವಿಲ್ ನ್ಯಾಯಾಧೀಶರಿಗೆ ರಾಷ್ಟ್ರೀಯ ಮಟ್ಟದಲ್ಲಿ ಏಕರೂಪ ವೇತನ, ನಿವೃತ್ತಿ ವಯಸ್ಸು 60ರಿಂದ 62ಕ್ಕೆ ನಿಗದಿ ಮತ್ತು ರಜೆಯಲ್ಲಿ ಕಡಿತ ಹಾಗೂ ಆರು ದಿನ ಕಾರ್ಯನಿರ್ವಹಿಸುವುದನ್ನು ರಾಷ್ಟ್ರೀಯ ನ್ಯಾಯಾಧೀಶರ ವೇತನ ಆಯೋಗ ಶಿಫಾರಸು ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.