ADVERTISEMENT

25 ವರ್ಷಗಳ ಹಿಂದೆ ಈ ದಿನ: ಪಾಕ್‌ನ 8 ಬಂಕರ್ ಧ್ವಂಸ– 20 ಉಗ್ರಗಾಮಿಗಳ ಸಾವು

ಪ್ರಜಾವಾಣಿ ವಿಶೇಷ
Published 26 ಜೂನ್ 2024, 19:02 IST
Last Updated 26 ಜೂನ್ 2024, 19:02 IST
<div class="paragraphs"><p>25 ವರ್ಷಗಳ ಹಿಂದೆ ಈ ದಿನ</p></div>

25 ವರ್ಷಗಳ ಹಿಂದೆ ಈ ದಿನ

   

ಪಾಕ್‌ನ 8 ಬಂಕರ್ ಧ್ವಂಸ: 20 ಉಗ್ರಗಾಮಿಗಳ ಸಾವು

ನವದೆಹಲಿ, ಜೂನ್‌ 26– ಭಾರತೀಯ ವಾಯುಪಡೆಯ ಮಿರಾಜ್‌– 2000 ಜೆಟ್‌ ಯುದ್ಧವಿಮಾನಗಳು ಬಟಾಲಿಕ್‌, ಡ್ರಾಸ್‌– ಮಪ್ಕೋವ್‌ ಕಣಿವೆ, ಟೈಗರ್‌ ಹಿಲ್‌ ಮತ್ತು ಮುಂಥೊ ಧಾ‌ಲೋ ಪ್ರದೇಶಗಳಲ್ಲಿ ಇಂದು ನಡೆಸಿದ ವ್ಯಾಪಕ ದಾಳಿಯಿಂದ ಪಾಕಿಸ್ತಾನಿ ಅತಿಕ್ರಮಣಕಾರರ ಎಂಟು ಬಂಕರ್‌ಗಳು ಪೂರ್ಣವಾಗಿ ನಾಶವಾಗಿದ್ದು, ಕೊನೆಪಕ್ಷ ಇಪ್ಪತ್ತು ಮಂದಿ ಪಾಕಿಸ್ತಾನದ ಉಗ್ರಗಾಮಿಗಳು ಸತ್ತಿದ್ದಾರೆ.

ADVERTISEMENT

ಪಾಕಿಸ್ತಾನಿ ಆಕ್ರಮಣಕಾರರನ್ನು ಹಿಮ್ಮೆಟ್ಟಿಸುವಲ್ಲಿ ಈಗ ಬಹುತೇಕ ಗಡಿ ನಿಯಂತ್ರಣ ರೇಖೆಯ ಸಮೀಪದಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದರಿಂದ ಪಾಕಿಸ್ತಾನಿ ಅತಿಕ್ರಮಣಕಾರರಿಗೆ ಶಸ್ತ್ರಾಸ್ತ್ರಗಳು ಮತ್ತು ಆಹಾರ ಪದಾರ್ಥ ಪೂರೈಕೆಯಾಗುತ್ತಿದ್ದ ಕ್ಯಾಂಪ್‌ಗಳು ಮತ್ತು ಬಂಕರ್‌ಗಳ ಮೇಲೆ ಯುದ್ಧ ವಿಮಾನಗಳು ದಾಳಿ ನಡೆಸಿವೆ.

ಮಂಗಳೂರು ಜೈಲಿನಿಂದ ಮೂವರು ಕೈದಿಗಳ ಪರಾರಿ

ಮಂಗಳೂರು, ಜೂನ್‌ 26– ನೂರು ವರ್ಷಗಳಷ್ಟು ಹಳೆಯದಾದ ನಗರದ ಸಬ್‌ ಜೈಲು ಸೆಲ್‌ನ ಸರಳನ್ನೇ ಕತ್ತರಿಸಿ, ಮೂವರು ಕುಖ್ಯಾತ ಕೈದಿಗಳು ಪರಾರಿಯಾದ ಘಟನೆ ನಿನ್ನೆ ಮಧ್ಯರಾತ್ರಿಯ ವೇಳೆಗೆ ನಡೆದಿದೆ.

ದೇಶದಾದ್ಯಂತ ಸಾವಿರಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕಳ್ಳನೋಟು ಪ್ರಕರಣದ ಕುಖ್ಯಾತ ಆರೋಪಿ ಭಾಸ್ಕರ ನಾಯರ್‌, ಪುತ್ತೂರು ಸೌಮ್ಯಭಟ್‌ ಕೊಲೆ ಪ್ರಕರಣದ ಆರೋಪಿ ಮಿಲ್ಟ್ರಿ ಆಶ್ರಫ್‌. ಕ್ರಿಮಿನಲ್‌ ಪ್ರಕರಣವೊಂದರ ಆರೋಪಿ ಮೋಹನ್ ದಾಸ್‌ ಮೂವರೂ ಜೈಲಿನಲ್ಲಿ ತಪ್ಪಿಸಿಕೊಂಡಿದ್ದು, ಪೊಲೀಸ್‌ ಇಲಾಖೆಗೆ ದೊಡ್ಡ ಸವಾಲಿನಂತಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.