ADVERTISEMENT

25 ವರ್ಷಗಳ ಹಿಂದೆ | ಕಾರ್ಗಿಲ್‌ನಲ್ಲಿ ಭಾರತದ ಸೇನೆ ಮುನ್ನಡೆ: ಉಗ್ರರಿಗೆ ಹಿನ್ನಡೆ

ಪ್ರಜಾವಾಣಿ ವಿಶೇಷ
Published 10 ಜೂನ್ 2024, 0:15 IST
Last Updated 10 ಜೂನ್ 2024, 0:15 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಭಾರತದ ಸೇನೆ ಮುನ್ನಡೆ: ಉಗ್ರರ ಪಡೆಗೆ ಹಿನ್ನಡೆ

ನವದೆಹಲಿ, ಮೇ 29 (ಪಿಟಿಐ): ಕಾರ್ಗಿಲ್‌ ಪ್ರದೇಶದಲ್ಲಿ ಭಾರತದ ಗಡಿಯೊಳಕ್ಕೆ ನುಸುಳಿರುವ ಅತಿಕ್ರಮಣಕಾರರನ್ನು ಸತತ ನಾಲ್ಕು ದಿನಗಳ ದಾಳಿಯಿಂದ ಹಿಮ್ಮೆಟ್ಟಿಸುವಲ್ಲಿ ಭಾರತದ ಸೇನೆ ಸಫಲವಾಗಿದೆ.

ಉಗ್ರಗಾಮಿಗಳ ವಿರುದ್ಧ ಕಾರ್ಯಾಚರಣೆ ನಡೆಸಿರುವ ಭಾರತದ ಸೇನೆ ದ್ರಾಸ್‌ ಪ್ರದೇಶದಲ್ಲಿ ವಾಸ್ತವ ನಿಯಂತ್ರಣ ರೇಖೆ ತಲುಪಿದೆ. ಅಲ್ಲದೆ ಇತರ ಪ್ರದೇಶಗಳಲ್ಲಿಯೂ ಅತಿಕ್ರಮಣಕಾರರನ್ನು ಹಿಮ್ಮೆಟ್ಟಿಸಿದೆ ಎಂದು ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ಅವರು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದ್ದು, ಭಾರತದ ಸೇನೆ ಮತ್ತು ವಾಯುಪಡೆಯ ಜಂಟಿ ಕಾರ್ಯಾಚರಣೆಯಲ್ಲಿ ಕನಿಷ್ಠ 400
ಅತಿಕ್ರಮಣಕಾರರು ಮೃತಪಟ್ಟಿದ್ದಾರೆ ಎಂದರು.

ಕಾರ್ಗಿಲ್‌ ಪ್ರದೇಶದ ಬಯಲು ಪ್ರದೇಶದಿಂದ ಅತಿಕ್ರಮಣಕಾರರನ್ನು ಓಡಿಸಲಾಗಿದೆ ಎಂದರು.

ADVERTISEMENT

ಈ ವರ್ಷ ಸಾಮಾನ್ಯ ವರ್ಗಾವಣೆ ಇಲ್ಲ

ಬೆಂಗಳೂರು, ಮೇ 29– ರಾಜ್ಯ ಸರ್ಕಾರದ ಸಿಬ್ಬಂದಿಯ ಸಾಮಾನ್ಯ ವರ್ಗಾವಣೆಯನ್ನು ಈ ವರ್ಷ ಮಾಡದಿರಲು ಇಂದು ಸೇರಿದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಇದು ಚುನಾವಣೆ ವರ್ಷವಾಗಿರುವುದರಿಂದ ಸಿಬ್ಬಂದಿಯ ಸಾಮಾನ್ಯ ವರ್ಗಾವಣೆ ಮಾಡುವುದಿಲ್ಲವೆಂದು ಮುಖ್ಯಮಂತ್ರಿಗಳು ಈಗಾಗಲೇ ಸಾರ್ವಜನಿಕವಾಗಿ ಹೇಳಿಕೆ ನೀಡಿರುವುದನ್ನು ಸಭೆ ಅನುಮೋದಿಸಿತು ಎಂದು ಕಾನೂನು ಸಚಿವ ಎಂ.ಸಿ. ನಾಣಯ್ಯ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.