ADVERTISEMENT

25 ವರ್ಷಗಳ ಹಿಂದೆ | ಅಶುದ್ಧತೆ: ಬೆಂಗಳೂರು ಸೇರಿ ಐದು ನಗರಗಳಿಗೆ ಕೋರ್ಟ್ ಛೀಮಾರಿ

ಪ್ರಜಾವಾಣಿ ವಿಶೇಷ
Published 24 ನವೆಂಬರ್ 2024, 23:02 IST
Last Updated 24 ನವೆಂಬರ್ 2024, 23:02 IST
<div class="paragraphs"><p>25 ವರ್ಷಗಳ ಹಿಂದೆ</p></div>

25 ವರ್ಷಗಳ ಹಿಂದೆ

   

ಆನೆಗಳ ಆಟ: ರೈತರ ಸಂಕಟ, ಮಂದಿಗೆ ರಂಜನೆ

ಬೆಂಗಳೂರು, ಮ. 24– ಕಾಡಾನೆಗಳ ಹಿಂಡು ಬನ್ನೇರುಘಟ್ಟ ಮತ್ತು ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ನಿನ್ನೆ ರಾತ್ರಿಯಿಂದ ನಸುಕಿನವರೆಗೆ ಎಬ್ಬಿಸಿದ ಹಾವಳಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ.

ಆನೆಗಳು ಪದೇ ಪದೇ ಈ ಭಾಗದಲ್ಲಿ ನಡೆಸುತ್ತಿರುವ ಹಾವಳಿಯನ್ನು ಸಮರ್ಪಕವಾಗಿ ನಿಗ್ರಹಿಸಿಲ್ಲ ಎಂದು ರೊಚ್ಚಿಗೆದ್ದ ಗ್ರಾಮಸ್ಥರು ಇಂದು ಬೆಳಿಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ರಸ್ತೆ ತಡೆ ನಡೆಸಿದರು.

ADVERTISEMENT

ಸುದ್ದಿ ತಿಳಿಯುತ್ತಿದ್ದಂತೆಯೇ ಆನೆಗಳನ್ನು ಮರಳಿ ಕಾಡಿಗೆ ಅಟ್ಟಲು ಬನ್ನೇರುಘಟ್ಟದ ಸಮೀಪದ ಇಲಾಖೆಯ ವಾಹನದಲ್ಲಿ ಬಂದಿಳಿದ ಸಿಬ್ಬಂದಿಯ ಮೇಲೆ ರೊಚ್ಚಿಗೆದ್ದ ಜನರು ಹಲ್ಲೆ ಮಾಡಲು ಆರಂಭಿಸಿದರು ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ತಿಳಿಸಿದರು. 

ಅಶುದ್ಧತೆ: ಬೆಂಗಳೂರು ಸೇರಿ ಐದು ನಗರಗಳಿಗೆ ಕೋರ್ಟ್ ಛೀಮಾರಿ

ನವದೆಹಲಿ, ನ. 24 (ಪಿಟಿಐ)– ಪೌರಕಾರ್ಮಿಕರು ಸಾಕಷ್ಟು ಸಂಖ್ಯೆಯಲ್ಲಿದ್ದರೂ ಶುದ್ಧತೆಯ ಕುರಿತು ಹೆಚ್ಚಿನ ಕಾಳಜಿ ವಹಿಸದ ಬೆಂಗಳೂರು ಸೇರಿದಂತೆ ರಾಷ್ಟ್ರದ ಐದು ನಗರಗಳಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ.

ದೆಹಲಿ, ಮುಂಬೈ, ಚೆನ್ನೈ ಮತ್ತು ಕಲ್ಕತ್ತ ಕೋರ್ಟಿನ ವಕ್ರದೃಷ್ಟಿಗೆ ಬಿದ್ದ ಉಳಿದ ನಾಲ್ಕು ನಗರಗಳು. ನ್ಯಾಯಮೂರ್ತಿ ಬಿ.ಎನ್.ಕೃಪಾಲ್‌ ಅವರ ನೇತೃತ್ವದಲ್ಲಿರುವ ಮೂರು ಸದಸ್ಯರ ವಿಭಾಗೀಯ ಪೀಠ ಇಂದು ‘ನಗರ ಶುದ್ಧಗೊಳಿಸಲು ನೇಮಿಸಲಾಗಿರುವ ಪೌರಕಾರ್ಮಿಕರಿಂದ ಸರಿಯಾಗಿ ಕೆಲಸ ತೆಗೆಯಲು ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು 6 ವಾರಗಳಲ್ಲಿ ತಿಳಿಸಲು ಸಂಬಂಧಿತ ನಗರ ಪಾಲಿಕೆಗಳ ಆಯುಕ್ತರಿಗೆ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.