ನವದೆಹಲಿ, ನ. 26 (ಪಿಟಿಐ)– ತಮಗೆ ವಿವರಣೆ ನೀಡಲು ಯಾವುದೇ ರೀತಿಯ ಅವಕಾಶ ನೀಡದೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮನ್ನು ಅಧಿಕಾರದಿಂದ ಪದಚ್ಯುತಗೊಳಿಸಿದರು ಎಂಬ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಹೇಳಿಕೆ ‘ಅತ್ಯಂತ ಬೇಜವಾಬ್ದಾರಿಯುತ
ಮತ್ತು ಆಧಾರರಹಿತ’ ಎಂದು ಕೇಂದ್ರ ಗೃಹ ಸಚಿವ ಎಲ್.ಕೆ. ಅಡ್ವಾಣಿ ಅವರು ಹೇಳಿದ್ದಾರೆ.
ತಮ್ಮ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಲ್ಯಾಣ್ ಸಿಂಗ್ ಅವರ ಹೇಳಿಕೆಗೆ ಇಂದು ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ತಮ್ಮ ವಿರುದ್ಧ ಮಾಡಿರುವ ಆರೋಪ ‘ಆಧಾರರಹಿತ’ ಎಂದಿದ್ದಾರೆ.
ಮುಲಾಯಂ ಸಿಂಗ್ ಯಾದವ್ ಅವರ ಮಗನ ಮದುವೆಯ ಆರತಕ್ಷತೆ ಸಮಾರಂಭದಲ್ಲಿ ಅವರು ವರದಿಗಾರರ ಜತೆ ಮಾತನಾಡಿದರು.
ಬೆಂಗಳೂರು, ನ. 26– ಗ್ರಾಮಾಂತರ ಪ್ರದೇಶದ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಕೃಪಾಂಕ ಕೊಡುವುದನ್ನು ರದ್ದುಗೊಳಿಸಿದ ಹೈಕೋರ್ಟಿನ ಏಕ ನ್ಯಾಯಮೂರ್ತಿಯವರ ತೀರ್ಪನ್ನು ವಿಭಾಗೀಯ ನ್ಯಾಯಪೀಠ ಇಂದು ಎತ್ತಿಹಿಡಿಯಿತು.
ಕೃಪಾಂಕ ಕೊಡುವುದು ಸಂವಿಧಾನದ 14, 15 ಮತ್ತು 16ನೇ ವಿಧಿಗಳಿಗೆ ವಿರುದ್ಧವಾಗುತ್ತದೆ ಎಂದು
ಮುಖ್ಯ ನ್ಯಾಯಮೂರ್ತಿ ವೈ. ಭಾಸ್ಕರ ರಾವ್ ಮತ್ತು ನ್ಯಾಯಮೂರ್ತಿ ಎ.ವಿ. ಶ್ರೀನಿವಾಸ ರೆಡ್ಡಿ ಅವರಿದ್ದ ವಿಭಾಗೀಯ ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.