ADVERTISEMENT

25 ವರ್ಷಗಳ ಹಿಂದೆ | ಭಾರತ ಗಡಿಯನ್ನು ಬಿಡಿ; ಪಾಕ್‌ಗೆ ರಷ್ಯಾ ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 23:30 IST
Last Updated 17 ಜೂನ್ 2024, 23:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಭಾರತ ಗಡಿಯನ್ನು ಬಿಡಿ ಪಾಕ್‌ಗೆ ರಷ್ಯಾ ಸೂಚನೆ

ಮಾಸ್ಕೊ, ಜೂನ್ 17 (ಪಿಟಿಐ)– ವಾಸ್ತವ ಹತೋಟಿ ರೇಖೆಯನ್ನು ಬದಲಾಯಿಸುವ ಪಾಕಿಸ್ತಾನದ ಪ್ರಯತ್ನವು ಗಂಭೀರ ಪರಿಣಾಮಗಳಿಗೆ ಕಾರಣವಾದೀತು ಎಂದು ರಷ್ಯಾ ಇಂದು ಪಾಕಿಸ್ತಾನಕ್ಕೆ ಎಚ್ಚರಿಕೆಯನ್ನು ನೀಡಿದ್ದು, ಭಾರತದ ನೆಲದಿಂದ ಶಸ್ತ್ರಧಾರಿ ಅತಿಕ್ರಮಣಕಾರರನ್ನು ವಾಪಸು ಕರೆಸಿಕೊಳ್ಳುವಂತೆ ಕಟ್ಟುನಿಟ್ಟಾಗಿ ಆದೇಶಿಸಿದೆ. ಈ ಮಧ್ಯೆ ಕಾರ್ಗಿಲ್‌ನಿಂದ ಸೇನೆಯನ್ನು ವಾಪಸು ತೆಗೆಯುವ ಬಗ್ಗೆ ಅಮೆರಿಕದ ಮಾತಿಗೆ ಮನ್ನಣೆ ಸಿಗದೇ ಹೋದರೆ ಪಾಕಿಸ್ತಾನದ ವಿರುದ್ಧ ಕಠಿಣ ಆರ್ಥಿಕ ನಿಷೇಧ ಹೇರುವ ಬಗ್ಗೆ ಅಮೆರಿಕ ಆಲೋಚಿಸುತ್ತಿದೆ ಎಂದು ವಾಷಿಂಗ್ಟನ್‌ನಿಂದ ವರದಿಯಾಗಿದೆ. 

ಕಾರ್ಗಿಲ್‌ನ ಇಂದಿನ ಬಿಕ್ಕಟ್ಟಿಗೆ ಪಾಕಿಸ್ತಾನವೇ ಕಾರಣ ಎಂದು ರಷ್ಯಾ ಹೇಳಿದೆ.  

ADVERTISEMENT

ಕೊಡಗಿನಲ್ಲಿ ವ್ಯಾಪಕ ಮಳೆ ಹಾರಂಗಿ ಜಲಾಶಯಕ್ಕೆ ನೀರು

ಮಡಿಕೇರಿ, ಜೂನ್ 17– ಕೊಡಗು ಜಿಲ್ಲೆಯಾದ್ಯಂತ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಕಳೆದ ಸಾಲಿಗೆ ಹೋಲಿಸಿದಲ್ಲಿ ಈ ಬಾರಿ ಮಳೆ ಪ್ರಮಾಣ ಇಮ್ಮಡಿಸಿದೆ. 

ಕಾವೇರಿ ಜಲಾನಯನ ಪ್ರದೇಶವಾದ ಭಾಗಮಂಡಲದಲ್ಲಿ ಇಂದು 46.8 ಮಿ.ಮೀ. ಮಳೆ ದಾಖಲಾಗಿದೆ. ಇದರೊಂದಿಗೆ ಪ್ರಸಕ್ತ ವರ್ಷಾರಂಭದಿಂದ ಈ ದಿನದವರೆಗೆ ಇಲ್ಲಿ 1068.7 ಮಿ. ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 476.6 ಮಿ.ಮೀ.ನಷ್ಟು ಮಳೆ ಆಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.