ADVERTISEMENT

25 ವರ್ಷಗಳ ಹಿಂದೆ: ಪ.ಬಂಗಾಳ ರೈಲು ನಿಲ್ದಾಣದಲ್ಲಿ ಬಾಂಬ್ ಸ್ಫೋಟಕ್ಕೆ 10 ಬಲಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 23:30 IST
Last Updated 22 ಜೂನ್ 2024, 23:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಕಲ್ಕತ್ತ, ಜೂನ್ 22 (ಯುಎನ್ಐ, ಪಿಟಿಐ)– ನ್ಯೂ ಜಲಪೈಗುರಿ ರೈಲು ನಿಲ್ದಾಣದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಶಕ್ತಿಯುತ ಬಾಂಬ್ ಸ್ಫೋಟದಲ್ಲಿ ಕಾರ್ಗಿಲ್‌ಗೆ ತೆರಳುತ್ತಿದ್ದ ಇಬ್ಬರು ಸೈನಿಕರೂ ಸೇರಿ 10 ಮಂದಿ ಬಲಿಯಾಗಿ, ಕನಿಷ್ಠ 80 ಮಂದಿ ಗಾಯಗೊಂಡಿದ್ದಾರೆ. 

2 ಫ್ಲಾಟ್‌ಫಾರಂಗಳ ಮಧ್ಯೆ ಸಂಭವಿಸಿದ ಶಬ್ದ ಒಂದು ಕಿ. ಮೀ. ವರೆಗೆ ಕೇಳಿಸಿತು. ಸ್ಫೋಟಕ್ಕೆ ದೆಹಲಿಗೆ ತೆರಳುತ್ತಿದ್ದ ಮಹಾನಂದ ಎಕ್ಸ್‌ಪ್ರೆಸ್ ರೈಲುಗಾಡಿ ಗುರಿಯಾಗಿದೆ ಎಂದು ಕಟಿಹಾರ್‌ನ ವಿಭಾಗೀಯ ರೈಲ್ವೆ ಮ್ಯಾನೇಜರ್ ಸೋಮನಾಥ ಮುಖರ್ಜಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT