ADVERTISEMENT

25 ವರ್ಷಗಳ ಹಿಂದೆ | ನಾಯಕತ್ವ: ವಿಧಾನಸಭಾ ಸದಸ್ಯರಿಗೆ ಸೀಮಿತ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 23:30 IST
Last Updated 9 ಅಕ್ಟೋಬರ್ 2024, 23:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ನವದೆಹಲಿ, ಅ. 9– ಕರ್ನಾಟಕದಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನೂತನ ನಾಯಕನನ್ನು ಚುನಾಯಿತ ಶಾಸಕರಿಂದ ಮಾತ್ರ ಆಯ್ಕೆ ಮಾಡಲು ಕಾಂಗ್ರೆಸ್‌ ವರಿಷ್ಠ ಮಂಡಳಿಯು ನಿರ್ಧರಿಸಿದ್ದು, ಇದರಿಂದ ವಿಧಾನಸಭೆಯ ಸದಸ್ಯರಲ್ಲದ ಬೇರೆ ಸ್ಪರ್ಧಾಕಾಂಕ್ಷಿಗಳ ಆಸೆಗೆ ಬಹುತೇಕವಾಗಿ ತಣ್ಣೀರೆರಚಿದಂತಾಗಿದೆ.

ಮುಂದಿನ ದಿನಗಳಲ್ಲಿ ಯಾವುದೇ ಭಿನ್ನಮತಕ್ಕೆ ಅವಕಾಶ ಕೊಡದಿರುವಂತೆ ಮುನ್ನೆಚ್ಚರಿಕೆಯಾಗಿ ಉಪಮುಖ್ಯಮಂತ್ರಿ ಸ್ಥಾನವನ್ನು ಸೃಷ್ಟಿಸದಿರಲು ಪಕ್ಷದ ವರಿಷ್ಠ ಮಂಡಳಿ ತೀರ್ಮಾನಿಸಿದೆ ಎನ್ನಲಾಗಿದೆ.

ಸೋಲಿಗೆ ಸೂಕ್ಷ್ಮ ಅಂಶಗಳು ಕಾರಣ

ADVERTISEMENT

ಬೆಂಗಳೂರು, ಅ. 9– ರಾಜ್ಯದಲ್ಲಿ ಜೆ.ಎಚ್‌.ಪಟೇಲ್‌ ನೇತೃತ್ವದ ಸರ್ಕಾರದ ವಿರುದ್ಧ ವ್ಯಕ್ತವಾದ ಜನಾದೇಶದಿಂದಲೇ ಜನತಾದಳ (ಯು)– ಬಿಜೆಪಿ ಮೈತ್ರಿಕೂಟ ನೆಲಕಚ್ಚಿತು ಎಂಬುದು ಸರಿಯಲ್ಲ, ಚುನಾವಣೆ ಫಲಿತಾಂಶ ಏರುಪೇರಾಗುವುದಕ್ಕೆ ಅನೇಕ ಕಾರಣಗಳಿ ರುತ್ತವೆ ಎಂದು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಮುಖಂಡ, ಸಚಿವ ರಾಮಕೃಷ್ಣ ಹೆಗಡೆ ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.