ADVERTISEMENT

25 ವರ್ಷಗಳ ಹಿಂದೆ | ಪಾಕ್‌ ಕ್ಷಿಪ್ರ ಕ್ರಾಂತಿ: ಷರೀಫ್‌ ಸರ್ಕಾರ ಪದಚ್ಯುತಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2024, 23:30 IST
Last Updated 12 ಅಕ್ಟೋಬರ್ 2024, 23:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಇಸ್ಲಾಮಾಬಾದ್‌, ಅ.12 (ಪಿಟಿಐ)– ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್‌ ಪರ್ವಿಜ್‌ ಮುಶ್ರಾಫ್‌ ಅವರನ್ನು ನವಾಜ್‌ ಷರೀಫ್‌ ಅವರು ವಜಾ ಮಾಡಿದ್ದಕ್ಕೆ ಪ್ರತಿಯಾಗಿ ನಡೆದ ಸೇನಾ ಕ್ಷಿಪ್ರ ಕ್ರಾಂತಿಯ‌ಲ್ಲಿ ಪ್ರಧಾನಿ ಷರೀಫ್‌ ಅವರ ಸರ್ಕಾರವನ್ನು ಪದಚ್ಯುತಗೊಳಿಸಿ, ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.

ಆದರೆ ಷರೀಫ್‌ ಅವರ ಸರ್ಕಾರವನ್ನು ಯಾರು ವಜಾ ಮಾಡಿದರು ಮತ್ತು ಈಗ ರಾಷ್ಟ್ರದ ಆಳ್ವಿಕೆ ಯಾರ ಕೈಯಲ್ಲಿ ಇದೆ ಎಂಬುದು ಮಧ್ಯರಾತ್ರಿಯವರೆಗೂ ಖಚಿತಪಟ್ಟಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT