ADVERTISEMENT

25 ವರ್ಷಗಳ ಹಿಂದೆ | ಪಾಲಿಟೆಕ್ನಿಕ್ ಪರೀಕ್ಷೆಯಲ್ಲಿ ಪಠ್ಯೇತರ ಪ್ರಶ್ನೆಗೆ ಆತಂಕ

​ಪ್ರಜಾವಾಣಿ ವಾರ್ತೆ
Published 19 ಮೇ 2024, 23:30 IST
Last Updated 19 ಮೇ 2024, 23:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಪಾಲಿಟೆಕ್ನಿಕ್ ಪರೀಕ್ಷೆಯಲ್ಲಿ ಪಠ್ಯೇತರ ಪ್ರಶ್ನೆಗೆ ಆತಂಕ

ಬೆಂಗಳೂರು, ಮೇ 19– ಪಾಲಿಟೆಕ್ನಿಕ್ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮೇ 5ರಂದು ನಡೆದ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ20 ಅಂಕಗಳ ಪ್ರಶ್ನೆಯೊಂದು ಪಠ್ಯೇತರ ಪ್ರಶ್ನೆಯಾಗಿದ್ದು, ವಿದ್ಯಾರ್ಥಿಗಳಿಗೆ ಆತಂಕವನ್ನುಂಟು ಮಾಡಿದೆ. 

ಈ ಪ್ರಶ್ನೆಗೆ ಪರಿಹಾರ ದೊರೆಯದಿದ್ದಲ್ಲಿ 100 ಅಂಕಗಳಲ್ಲಿ 20 ಅಂಕಗಳು ತಾವಾಗಿಯೇ ಕೈಬಿಟ್ಟು ಹೋಗುವುದರಿಂದ ಪಡೆಯುವ ಅಂಕ ಕಡಿಮೆಯಾಗಿ, ಫಲಿತಾಂಶವೂ ಕಡಿಮೆಯಾಗುವ ಸಂಭವವಿದೆ. 

ADVERTISEMENT

ಪ್ರಥಮ ವರ್ಷದ ಫಲಿತಾಂಶಶೇ 20ರಿಂದ 25ರಷ್ಟು ಇದ್ದು, ಆ ಪ್ರಮಾಣ ಈ ವರ್ಷ ಏಳೆಂಟರಷ್ಟು ಕಡಿಮೆಯಾಗುವ ಆತಂಕ ಇದೆ ಎಂಬುದು ನಗರದ ಸರ್ಕಾರಿ ಪಾಲಿಟೆಕ್ನಿಕ್ ಉಪನ್ಯಾಸಕರೊಬ್ಬರ ಅಭಿಪ್ರಾಯ. 

ಸೋನಿಯಾ ಅಭಿಮಾನಿ ಆತ್ಮಾಹುತಿ ಯತ್ನ

ನವದೆಹಲಿ, ಮೇ 19 (ಯುಎನ್ಐ, ಪಿಟಿಐ)– ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಇಲ್ಲಿನ ಅವರ ನಿವಾಸದ ಸಮೀಪ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಅಭಿಮಾನಿಗಳು ಆತ್ಮಾಹುತಿಗೆ ಯತ್ನಿಸಿದ ಘಟನೆಗಳು ಬುಧವಾರ ನಡೆದಿವೆ. 

ಸೋನಿಯಾ ಅವರ ನಿವಾಸದ ಹೊರಗೆ ಮಹಿಳಾ ಅಭಿಮಾನಿಯೊಬ್ಬರು ತಮ್ಮ ಮೈಮೇಲೆ ಬೆಂಕಿ ಹಚ್ಚಿಕೊಂಡರೆ,ಹೈದರಾಬಾದಿನಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯರು ನಡೆಸಿದ ಆತ್ಮಾಹುತಿ ಯತ್ನವನ್ನು ವಿಫಲಗೊಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.