ADVERTISEMENT

ಶನಿವಾರ, 13–11–1993

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2018, 20:00 IST
Last Updated 12 ನವೆಂಬರ್ 2018, 20:00 IST

ಶರಣಾಗದಿದ್ದರೆ ಕಾರ್ಯತಂತ್ರ ಬದಲು: ಉಗ್ರಗಾಮಿಗೆ ಎಚ್ಚರಿಕೆ

ಶ್ರೀನಗರ, ನ. 12 (ಯುಎನ್ಐ, ಪಿಟಿಐ)– ಹಜರತ್‌ಬಾಲ್ ಮಸೀದಿಯಲ್ಲಿ ಆಶ್ರಯ ಪಡೆದಿರುವ ಉಗ್ರಗಾಮಿಗಳು ಯಾವುದೇ ಸಂದರ್ಭದಲ್ಲಿ ಭದ್ರತಾಪಡೆಗಳಿಗೆ ಶರಣಾಗಬೇಕೆಂದು ಸರ್ಕಾರ ಬಯಸುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ (ಗೃಹ) ಮೆಹಮೂದ್–ಉರ್–ರೆಹಮಾನ್ ಇಂದು ಸಂಜೆ ಇಲ್ಲಿ ಪತ್ರಕರ್ತರೊಡನೆ ಮಾತನಾಡುತ್ತ ಹೇಳಿದರು.

ಬಿನ್ನಿ ಮಿಲ್ ಪುನರಾರಂಭ ಸಂಭವ

ADVERTISEMENT

ಬೆಂಗಳೂರು, ನ. 12– ಸಣ್ಣ ಗಲಾಟೆಯಿಂದಾಗಿ ಲಾಕೌಟ್ ಆಗಿರುವ ನಗರದ ಬಿನ್ನಿಮಿಲ್ ಮತ್ತೆ ತೆರೆಯುವ ಸ್ಪಷ್ಟ ಸೂಚನೆಗಳಿವೆ. ಆದರೆ, ಗಲಾಟೆಯ ಹಿನ್ನೆಲೆಯಲ್ಲಿ ಮಿಲ್ಲನ್ನು ಶಾಶ್ವತವಾಗಿ ಮುಚ್ಚಲು ಆಡಳಿತ ಮಂಡಲಿ ಪ್ರಯತ್ನಿಸುತ್ತಿದೆ ಎಂದು ಕಾರ್ಮಿಕರು ಆರೋಪಿಸಿದರೆ, ಮತ್ತೆ ತೆರೆಯಲಾಗುವುದು ಎಂದು ಆಡಳಿತ ಮಂಡಲಿ ಸ್ವಷ್ಟಪಡಿಸಿದೆ.

ಬೋನಸ್ ಹಾಗೂ ಕಳೆದ ತಿಂಗಳ ಸಂಬಳವನ್ನು ನಾಳೆಯಿಂದ ವಿತರಿಸಲು ಆಡಳಿತ ಮಂಡಲಿ ಒಪ್ಪಿದೆ. ಮಾತುಕತೆ 18ನೇ ತಾರೀಖು ಪುನಃ ಮದರಾಸಿನಲ್ಲಿ ನಡೆಯಲಿದೆ. ಈ ಮಾತುಕತೆಯ ನಂತರ ಮಿಲ್ ಪುನರಾರಂಭದ ಸಾಧ್ಯತೆಗಳಿವೆ.

ವೃತ್ತಿ ಶಿಕ್ಷಣ: ಅಧಿಕ ಶುಲ್ಕ ಸೀಟು ಭರ್ತಿ

ಬೆಂಗಳೂರು, ನ. 12– ವೈದ್ಯಕೀಯ ಹಾಗೂ ಮತ್ತಿತರ ವೃತ್ತಿಪರ ಶಿಕ್ಷಣ ಕೋರ್ಸುಗಳ ಅಧಿಕ ಶುಲ್ಕ ಪಾವತಿ ಸೀಟುಗಳಲ್ಲಿ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಾದ ಎಲ್ಲ ಸೀಟುಗಳೂ ಭರ್ತಿಯಾಗಿವೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಹಂಗಾಮಿ ನಿರ್ದೇಶಕಿ ಡಾ. ಕಾಂತಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.