ADVERTISEMENT

50 ವರ್ಷಗಳ ಹಿಂದೆ | ಯಥಾಸ್ಥಿತಿಯಿಂದ ರಾಜ್ಯಕ್ಕೆ ಸಮಸ್ಯೆ ಇಲ್ಲ; ಅರಸು ಸ್ಪಷ್ಟನೆ

ಗುರುವಾರ, 24 ಜನವರಿ 1974

ಪ್ರಜಾವಾಣಿ ವಿಶೇಷ
Published 23 ಜನವರಿ 2024, 20:30 IST
Last Updated 23 ಜನವರಿ 2024, 20:30 IST
50 ವರ್ಷಗಳ ಹಿಂದೆ ಭಾನುವಾರ 12.12.1971
50 ವರ್ಷಗಳ ಹಿಂದೆ ಭಾನುವಾರ 12.12.1971   

ದೀಕ್ಷಿತ್ ಆರೋಪ ‘ರಾಜಕೀಯಪ್ರೇರಿತ’ ಎಂದ ಅಡ್ವಾಣಿ: ನ್ಯಾಯಾಂಗ ತನಿಖೆಗೆ ಆಗ್ರಹ

ಅಹಮದಾಬಾದ್‌, ಜ. 23– ಗುಜರಾತ್ ಗಲಭೆಗಳಿಗೆ ತಮ್ಮ ಪಕ್ಷದ ಕುಮ್ಮಕ್ಕೇ ಕಾರಣ ಎಂಬ ಕೇಂದ್ರ ಗೃಹ ಸಚಿವ ಉಮಾಶಂಕರ್ ದೀಕ್ಷಿತರ ಆರೋಪವನ್ನು ಜನಸಂಘದ ಅಧ್ಯಕ್ಷ ಎಲ್‌.ಕೆ. ಅಡ್ವಾಣಿ ಅವರು ಇಂದು ಸ್ಪಷ್ಟವಾಗಿ ನಿರಾಕರಿಸಿ, ಕಳೆದೆರಡು ವಾರಗಳಲ್ಲಿ ನಡೆದ ‘ಎಲ್ಲ ಘಟನೆಗಳ’ ನ್ಯಾಯಾಂಗ ವಿಚಾರಣೆ ನಡೆಸಬೇಕೆಂದು ಆಗ್ರಹಪಡಿಸಿದರು.

‘ಜನತೆಯಲ್ಲಿ ಕುದಿಯುತ್ತಿರುವ ತಳಮಳವೇ’ ಈಗಿನ ಹಿಂಸಾಕಾಂಡಕ್ಕೆ ನೇರ ಕಾರಣವೆಂಬುದನ್ನು ತನಿಖೆ ಸ್ಪಷ್ಟಪಡಿಸುತ್ತದೆಂಬ ಭರವಸೆ ತಮಗಿದೆಯೆಂದು ಅವರು ನುಡಿದರು.

ADVERTISEMENT

***

ಯಥಾಸ್ಥಿತಿಯಿಂದ ರಾಜ್ಯಕ್ಕೆ ಸಮಸ್ಯೆ ಇಲ್ಲ; ಅರಸು ಸ್ಪಷ್ಟನೆ

ಬೆಂಗಳೂರು, ಜ. 23– ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಮುಂದುವರಿದರೆ ಕರ್ನಾಟಕಕ್ಕೆ ಯಾವ ಸಮಸ್ಯೆಯೂ ಇಲ್ಲ.

ಈ ಅಂಶವನ್ನು ಮುಖ್ಯಮಂತ್ರಿ ಅರಸು, ಕೇಂದ್ರ ಗೃಹ ಸಚಿವ ಉಮಾಶಂಕರ್ ದೀಕ್ಷಿತ್ ಅವರಿಗೆ ಮನವರಿಕೆ ಮಾಡಿಕೊಟ್ಟು ನಗರಕ್ಕೆ ಹಿಂದಿರುಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.