ADVERTISEMENT

50 ವರ್ಷಗಳ ಹಿಂದೆ | ಲಿಂಗನಮಕ್ಕಿ ಅಣೆಗೆ 8 ಅಡಿಯಷ್ಟು ನೀರು: ಭರ್ಜರಿ ಮಳೆ

06 ಜುಲೈ 1974, ಮಂಗಳವಾರ

ಪ್ರಜಾವಾಣಿ ವಿಶೇಷ
Published 5 ಜುಲೈ 2024, 20:52 IST
Last Updated 5 ಜುಲೈ 2024, 20:52 IST
   

ಲಿಂಗನಮಕ್ಕಿ ಅಣೆಗೆ 8 ಅಡಿಯಷ್ಟು ನೀರು: ಭರ್ಜರಿ ಮಳೆ

ಬೆಂಗಳೂರು, ಜುಲೈ 5– ಸುಮಾರು ಆರೇಳು ಇಂಚುಗಳ ಭರ್ಜರಿ ಮಳೆ ಪಡೆಯುತ್ತಿರುವ ಲಿಂಗನಮಕ್ಕಿ ಜಲಾನಯನ ಪ್ರದೇಶವು ಕಳೆದ 24 ಗಂಟೆಗಳ ಅವಧಿಯಲ್ಲಿ ಜಲಾಶಯ ಮಟ್ಟವನ್ನು ಎಂಟು ಅಡಿಗಳಷ್ಟು ಏರಿಸಿರುವುದರ ಜತೆಗೆ, ಇನ್ನಷ್ಟು ವಿದ್ಯುತ್ ಕಡಿತದ ಅಂಜಿಕೆಯನ್ನು ಬಹುತೇಕ ದೂರ ಮಾಡಿದೆ.

‘ನಾವು ಕಷ್ಟದಿಂದ ಪೂರ್ತಿ ಪಾರಾಗಿಲ್ಲ. ಆದರೆ ಮುಂಗಾರು ಮಳೆ ಆರಂಭವಾಗಿ ನೀರಿನ ಪ್ರವಾಹ ಹೆಚ್ಚಿರುವುದರಿಂದ ಸದ್ಯದ ಮಟ್ಟಿಗೆ ಆನಂದಪಟ್ಟುಕೊಳ್ಳಲು ಕಾರಣಗಳಿವೆ’ ಎಂದು ವಿದ್ಯುಚ್ಛಕ್ತಿ ಖಾತೆ ಮಂತ್ರಿ
ಎಚ್.ಎಂ. ಚನ್ನಬಸಪ್ಪ ಅವರು ತಿಳಿಸಿದರು.

ADVERTISEMENT

***

ಹೃದ್ರೋಗ ತಡೆಗೆ ಮದ್ದು ಮೊಸರು

ನವದೆಹಲಿ, ಜುಲೈ 5– ‘ಮೊಸರು ಆರೋಗ್ಯಕ್ಕೆ ಒಳ್ಳೆಯದು’. ಭಾರತೀಯರು ಹಿಂದಿನ ಕಾಲದಿಂದಲೂ ತಳೆದಿರುವ ನಂಬಿಕೆ ಇದು. ಹೃದಯಾಘಾತ ಸಂಭವಿಸುವುದನ್ನು ಮೊಸರು ತಡೆಯುತ್ತದೆ ಎಂದು ಈಚಿನ ವೈದ್ಯಕೀಯ ಅಧ್ಯಯನ ತಿಳಿಸಿದೆ.

‘ನ್ಯೂಯಾರ್ಕ್ ಟೈಂಸ್’ ವರದಿ ಮಾಡಿರುವಂತೆ ಆಫ್ರಿಕಾ ಮತ್ತು ಅಮೆರಿಕದ ವೈದ್ಯ ಅಧ್ಯಯನವು ಮೊಸರಿನ ಮಹಿಮೆಯನ್ನು ಸಾಬೀತುಪಡಿಸಿದೆ.

ಮೊಸರನ್ನು ಸೇವಿಸುವುದರಿಂದ ರಕ್ತದಲ್ಲಿ ಕೊಲೆಸ್ಟರಾಲ್ ಪ್ರಮಾಣವನ್ನು ಇಳಿಸಬಹುದು. ಇದೇ ವೈದ್ಯ ವಿಜ್ಞಾನಿಗಳ ಈಚಿನ ಶೋಧ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.