ADVERTISEMENT

50 ವರ್ಷಗಳ ಹಿಂದೆ: ಬಿಹಾರದಲ್ಲಿ ವಿರೋಧಿ ಶಾಸಕರು ಕಾಂಗ್ರೆಸ್ಸಿಗೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 19:22 IST
Last Updated 17 ನವೆಂಬರ್ 2024, 19:22 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಬಿಹಾರದಲ್ಲಿ ವಿರೋಧಿ ಶಾಸಕರು ಕಾಂಗ್ರೆಸ್ಸಿಗೆ

ಪಟ್ನಾ, ನ. 17– ಬಿಹಾರದ 11
ಮಂದಿ ವಿಧಾನಸಭಾ ಸದಸ್ಯರು
ಮತ್ತು ವಿಧಾನ ಪರಿಷತ್ತಿನ ಒಬ್ಬ
ಸದಸ್ಯರನ್ನು (12 ಮಂದಿಯೂ ಸಂಸ್ಥಾ ಕಾಂಗ್ರೆಸ್ಸಿಗರು) ಇಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಬರೂವ ಅವರು ತಮ್ಮ ಪಕ್ಷಕ್ಕೆ ಸೇರಿಸಿಕೊಂಡರು.

ಅಲ್ಲದೆ ಜನಸಂಘದ ಮೂವರು ವಿಧಾನಸಭಾ ಸದಸ್ಯರೂ ಕಾಂಗ್ರೆಸ್ ಸೇರಲು ಬಯಸಿ ಅನುಮತಿ ಕೋರಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸೀತಾರಾಂ ಕೇಸರಿ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದಿದ್ದಾರೆ.

ADVERTISEMENT

ರಾಜ್ಯದಲ್ಲಿ ಮತ್ತಷ್ಟು ಬಸ್
ಮಾರ್ಗಗಳ ಸ್ವಾಧೀನ ಇಲ್ಲ

ಕಲ್ಬುರ್ಗಿ, ನ. 17– ಬಸ್ ಮಾರ್ಗಗಳನ್ನು ಹೊಸದಾಗಿ ಸ್ವಾಧೀನಕ್ಕೆ ತೆಗೆದುಕೊಳ್ಳುವ ಯೋಜನೆಯನ್ನು ಸರ್ಕಾರ ಕೈಬಿಟ್ಟಿದೆಯೆಂದು ಸಾರಿಗೆ ಸಚಿವ ಮಹಮದ್ ಅಲಿ ಅವರು ಇಂದು ಇಲ್ಲಿ ತಿಳಿಸಿದರು.

ಈಗಾಗಲೇ ಸ್ವಾಧೀನ ಮಾಡಿಕೊಂಡಿರುವ ಮಾರ್ಗಗಳಲ್ಲಿ ಉತ್ತಮ ಪ್ರಯಾಣದ ಸೌಲಭ್ಯ
ಗಳನ್ನು ಒದಗಿಸಲು ಸರ್ಕಾರ ತೀರ್ಮಾನಿಸಿ
ದೆಯೆಂದು ಅವರು ಹೇಳಿದರು. ಕಾಂಟ್ರ್ಯಾಕ್ಟ್ ಬಸ್ಸುಗಳನ್ನು ಸರ್ಕಾರವೇ ವಹಿಸಿಕೊಳ್ಳುವ ಬಗ್ಗೆ ಮುಖ್ಯಮಂತ್ರಿಗಳು ಇನ್ನೂ ತೀರ್ಮಾನ ಕೈಗೊ
ಳ್ಳಬೇಕಾಗಿದೆಯೆಂದು ಸಚಿವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.