ADVERTISEMENT

50 ವರ್ಷದ ಹಿಂದೆ: ಮಾದರಿಯೇ ಅಲ್ಲದ ‘ಮಾದರಿ’ ಗ್ರಾಮ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 0:28 IST
Last Updated 25 ಜುಲೈ 2024, 0:28 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಮಾದರಿಯೇ ಅಲ್ಲದ ‘ಮಾದರಿ’ ಗ್ರಾಮ

ಬೆಂಗಳೂರು, ಜುಲೈ 24– ಸುಮಾರು ನಲವತ್ತು ವರ್ಷದ ಚನ್ನಬಂಟಯ್ಯ ಮಂಗಳವಾರ ಆಳದ ಬಾವಿಯಿಂದ ನೀರು ಎಳೆಯುತ್ತಿದ್ದಾಗ ಮಂತ್ರಿ ಪಕ್ಕದಲ್ಲೇ ಇದ್ದರು. ಸುಮಾರು ತಿಂಗಳ ಹಿಂದೆ ಪೊಲೀಸರ ರಕ್ಷಣೆಯಲ್ಲಿ ಅದೇ ಬಾವಿಯಲ್ಲಿ ಅವನು ನೀರೆಳೆದಿದ್ದ. ಆದರೆ ಬೇರೆ ಹಗ್ಗದಿಂದ.

ಈಗಿನ ಹಗ್ಗ ಪೊಲೀಸರು ಕೊಡಿಸಿದ್ದು. ಹಗ್ಗ ಕೊಡಿಸಿದ ಪೊಲೀಸರೇ ತನಗೆ ರಕ್ಷಣೆಯನ್ನೂ ನೀಡಬೇಕೆಂದು ಕೇಳಿಕೊಂಡ ಚನ್ನಬಂಟಯ್ಯ.

ADVERTISEMENT

ಚನ್ನಬಂಟಯ್ಯನ ಮಾತಿನಂತೆ ಅವನ ಮನವಿಗೊಂದು ಕಾರಣವಿತ್ತು. ತಿಂಗಳ ಹಿಂದೆ ಪೊಲೀಸರ ರಕ್ಷಣೆಯಲ್ಲಿ ಬಾವಿಯಲ್ಲಿ ನೀರು ಸೇದಿದ ಮೇಲೆ ಸವರ್ಣ ಹಿಂದೂಗಳು ಅವನನ್ನು ಮೂದಲಿಸಿ, ಬೆದರಿಸಿದ್ದರಂತೆ.

ಚನ್ನಬಂಟಯ್ಯ ಹರಿಜನ.

ಪ್ರಕ್ಷುಬ್ಧ: ಬೆಂಗಳೂರಿನಿಂದ ಸುಮಾರು 50 ಮೈಲಿ ದೂರದ ಕನಕಪುರ ತಾಲ್ಲೂಕಿನ ಬಾಪೂಜಿ ಕಾಲೊನಿ, ಹದಿಮೂರು ವರ್ಷಗಳ ಹಿಂದೆ ‘ಮಾದರಿ’ ಗ್ರಾಮ ಆಗಿ ಅಸ್ತಿತ್ವಕ್ಕೆ ಬಂತು. ಆದರೆ ಅಲ್ಲಿ ಇತರರಿಗೆ ಮಾದರಿಯಾದುದೇನಿಲ್ಲ. ಇಂದು ಕೂಡ ಪೊಲೀಸ್ ರಕ್ಷಣೆಯಲ್ಲಿ ಬದುಕಬೇಕಾಗಿರುವ ಪ್ರಕ್ಷುಬ್ಧ ಗುಡಿಸಲುಗಳ ಗುಂಪು ಅದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.