ADVERTISEMENT

50 ವರ್ಷಗಳ ಹಿಂದೆ | ಬರಗಾಲ ಪರಿಹಾರ ವೆಚ್ಚದ ಹಣ ಕಸಿದ ಆರೋಪ: ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಮೇ 2024, 18:26 IST
Last Updated 28 ಮೇ 2024, 18:26 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಬರಗಾಲ ಪರಿಹಾರ ವೆಚ್ಚದ ಹಣ ಕಸಿದ ಆರೋಪ: ತನಿಖೆಗೆ ಆಗ್ರಹ

ಬೆಂಗಳೂರು, ಮೇ 28– ಬರಪರಿಹಾರ ಕಾಮಗಾರಿ ವೆಚ್ಚದಲ್ಲಿ ಶೇ 25ರಷ್ಟು ಹಣವನ್ನು ಸಂಸ್ಥಾ ಕಾಂಗ್ರೆಸ್ಸಿನ ಏಜೆಂಟರು ಕಸಿದುಕೊಂಡಿದ್ದಾರೆಂದು ಮುಖ್ಯಮಂತ್ರಿ ದೇವರಾಜ ಅರಸು ಅವರು ಮಾಡಿದ್ದರೆನ್ನಲಾದ ಚುನಾವಣೆ ಭಾಷಣವನ್ನು ವಿಧಾನ ಪರಿಷತ್ತಿನಲ್ಲಿ ಇಂದು ತೀವ್ರವಾಗಿ ಆಕ್ಷೇಪಿಸಿದ ವಿರೋಧ ಪಕ್ಷದ ನಾಯಕ ರಾಮಕೃಷ್ಣ ಹೆಗಡೆ ಅವರು, ಆ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಸವಾಲು ಹಾಕಿದರು.

‘ಗಂಡಸುತನ ಇದ್ದರೆ ನ್ಯಾಯಾಂಗ ತನಿಖೆ ನಡೆಸಿ ಆಪಾದನೆಯನ್ನು ಸಾಬೀತು ಮಾಡಿ. ಇಲ್ಲವಾದರೆ ಆ ಮಾತನ್ನು ವಾಪಸು ತೆಗೆದುಕೊಳ್ಳಿ’ ಎಂದರು.

ADVERTISEMENT

ಹಿಡುವಳಿ ಘೋಷಣೆ ಅವಧಿ ವಿಸ್ತರಣೆ: ಇಂದು ತುರ್ತು ಶಾಸನ

ಬೆಂಗಳೂರು, ಮೇ 28– ರಾಜ್ಯದ ಭೂಸುಧಾರಣೆ ತಿದ್ದುಪಡಿ ಶಾಸನದ ರೀತ್ಯ ಹಿಡುವಳಿದಾರರು ಸರ್ಕಾರಕ್ಕೆ ತಮ್ಮ ಜಮೀನಿನ ಬಗ್ಗೆ ಘೋಷಣೆ ಸಲ್ಲಿಸಲು ಇದ್ದ ಅವಧಿಯನ್ನು 90 ದಿನಗಳಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.