ADVERTISEMENT

50 ವರ್ಷಗಳ ಹಿಂದೆ: ಆಕ್ಟ್ರಾಯ್‌ಗೆ ಸೂಕ್ತ ಬದಲಿ ಆದಾಯ ಮೂಲ ಅರಸಲು ಪ್ರತಿನಿಧಿಗಳತಂಡ

​ಪ್ರಜಾವಾಣಿ ವಾರ್ತೆ
Published 15 ಜನವರಿ 2024, 18:39 IST
Last Updated 15 ಜನವರಿ 2024, 18:39 IST
   

ಆಕ್ಟ್ರಾಯ್‌ಗೆ ಸೂಕ್ತ ಬದಲಿ ಆದಾಯ ಮೂಲ ಅರಸಲು ಪ್ರತಿನಿಧಿಗಳ ತಂಡ

ಬೆಂಗಳೂರು, ಜ. 15– ಸಾಮಾನು ಸಾಗಿ ಸುವ ಲಾರಿಗಳಿಗೆ ಕಿರುಕುಳ ತಪ್ಪಿಸಿ, ಬೇರೆ ರೂಪದಲ್ಲಿ ಅದೇ ಆದಾಯವನ್ನು ಒದಗಿಸುವ ಸೂಕ್ತ ಬದಲು ಕ್ರಮ ಸೂಚಿಸಲ್ಪಟ್ಟರೆ ಆಕ್ಟ್ರಾಯ್‌ ಸುಂಕವನ್ನು ರದ್ದು ಮಾಡಲು ಸರ್ಕಾರ ಸಿದ್ಧವಿದೆಯೆಂದು ಅರ್ಥ ಸಚಿವ ಎಂ.ವೈ.ಘೋರ್ಪಡೆ ಅವರು ಇಂದು ಇಲ್ಲಿ ತಿಳಿಸಿದರು.

ಈ ಉದ್ದೇಶದಿಂದ ಸೂಕ್ತ ಹಾಗೂ ಆರ್ಥಿಕವಾಗಿ ಕಾರ್ಯಸಾಧ್ಯವಾದ
ಬದಲಿ ಆದಾಯ ಕ್ರಮವನ್ನು ಕಂಡುಹಿಡಿಯಲು ಸಾರಿಗೆ ಲಾರಿ ಮಾಲೀಕರು, ಕಾರ್ಪೊರೇಷನ್, ವಾಣಿಜ್ಯ ಸಂಘ ಹಾಗೂ ಸಂಬಂಧಪಟ್ಟ ಖಾತೆಗಳ ಪ್ರತಿನಿಧಿಗಳೊಡನೆ ಸಚಿವರು ಸಮಾಲೋಚನೆಯನ್ನು
ಆರಂಭಿಸಲಿದ್ದಾರೆ.

ADVERTISEMENT

ಕಿರುಕುಳ: ಆಕ್ಟ್ರಾಯ್ ಸುಂಕವು ಕಿರುಕುಳಕಾರಕ ಹಾಗೂ ಹಳೆಯ ಪದ್ಧತಿ ಎಂಬುದನ್ನು ಮನವರಿಕೆ ಮಾಡಿಕೊಡಲು ಸಾರಿಗೆ ಮಾಲೀಕರು ವಿಶೇಷ ಪ್ರಯತ್ನ ಮಾಡಬೇಕಾಗಿಲ್ಲವೆಂದು, ಲಾರಿಗಳ ಮೆರವಣಿಗೆ ಮೂಲಕ ತಮ್ಮನ್ನು ಭೇಟಿ ಮಾಡಿದ ನಿಯೋಗಕ್ಕೆ ಅರ್ಥ ಸಚಿವ ಘೋರ್ಪಡೆ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.