ADVERTISEMENT

50 ವರ್ಷಗಳ ಹಿಂದೆ: ‘ಕ್ರೂರ ಆಜ್ಞೆ’ಗೆ ವಿರೋಧ ಪಕ್ಷದ ಟೀಕೆ, ಸಭಾತ್ಯಾಗ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2024, 18:36 IST
Last Updated 18 ನವೆಂಬರ್ 2024, 18:36 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

‘ಕ್ರೂರ ಆಜ್ಞೆ’ಗೆ ವಿರೋಧ ಪಕ್ಷದಟೀಕೆ, ಸಭಾತ್ಯಾಗ

ನವದೆಹಲಿ, ನ. 18– ಕಳ್ಳಸಾಗಣೆ ಆಪಾದನೆಗೆ ಒಳಗಾದವರು ನ್ಯಾಯಾಲಯದ ಮೊರೆ ಹೋಗಲು ಸಾಧ್ಯವಿಲ್ಲದಂತೆ ಮಾಡಲು ಶನಿವಾರ ರಾಷ್ಟ್ರಪತಿ ಹೊರಡಿಸಿದ ಆಜ್ಞೆ ‘ಕ್ರೂರ ಮತ್ತು ಜನತಂತ್ರ ವಿರೋಧಿ’ ಎಂದು ಸಂಸತ್ತಿನ ಉಭಯ ಸದನಗಳಲ್ಲೂ ಇಂದು ವಿರೋಧ ಪಕ್ಷದವರು ಖಂಡಿಸಿದರು.

‘ದುರುದ್ದೇಶದಿಂದ ಕೂಡಿದ’ ಈ ಆಜ್ಞೆ ಸಂವಿಧಾನ ವಿರೋಧಿ ಮತ್ತು ರಾಜಕೀಯ ಪ್ರತಿ
ಪಕ್ಷದವರ ವಿರುದ್ಧ ಈ ಆಜ್ಞೆಯನ್ನು ಸರ್ಕಾರ ದುರುಪಯೋಗಪಡಿಸಿಕೊಳ್ಳಬಹುದು ಎಂಬ ಭೀತಿ ವ್ಯಕ್ತಪಡಿಸಿದ ವಿರೋಧ ಪಕ್ಷದವರು, ಪ್ರತಿಭಟನಾರ್ಥ ಸಭಾತ್ಯಾಗ ಮಾಡಿದರು. ಸಭಾತ್ಯಾಗದಲ್ಲಿ ಸಿಪಿಐ ಭಾಗವಹಿಸಲಿಲ್ಲ.

ADVERTISEMENT

ಈಗ ಪುರುಷರದೇ ಮೇಲುಗೈ

ವಿಶ್ವರಾಷ್ಟ್ರ ಸಂಸ್ಥೆ, ನ. 18– ಪ್ರಪಂಚದಲ್ಲಿ ಪುರುಷರ ಸಂಖ್ಯೆ ತೀವ್ರಗತಿಯಿಂದ ಏರಿ ಈಗ ಮಹಿಳೆಯರ ಸಂಖ್ಯೆಯನ್ನು ಒಂದು ಕೋಟಿಯಿಂದ ಮೀರಿಸಿದೆ.

ಈ ಶತಮಾನದ ಉಳಿದ ಕಾಲಕ್ಕೂ ಇದೇ ಪ್ರವೃತ್ತಿ ಇರಬಹುದೆಂದು ವಿಶ್ವರಾಷ್ಟ್ರ ಸಂಸ್ಥೆ ವರದಿ ಮಾಡಿದೆ. 1965ರಲ್ಲಿ 1.165 ಶತಕೋಟಿ ಮಹಿಳೆಯರು ಮತ್ತು 1.137 ಶತಕೋಟಿ ಪುರುಷರು ಇದ್ದರು. ಈಗ ಪರಿಸ್ಥಿತಿ ಹಿಂದುಮುಂದಾಗಿದೆ. 1.998 ಶತಕೋಟಿ ಪುರುಷರೂ, 1.988 ಶತಕೋಟಿ ಮಹಿಳೆಯರೂ ಇದ್ದಾರೆ. ವಿಶ್ವದ ಜನಸಂಖ್ಯೆ 3.986 ಶತಕೋಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.