ಸಿಬಿಐ ವರದಿಗಾಗಿ ಸತತ ಒತ್ತಾಯ
ನವದೆಹಲಿ, ನ. 22– ಆಮದು ಲೈಸೆನ್ಸ್ ಹಗರಣದ ಕುರಿತು ಸಿಬಿಐ ವರದಿ ಮಂಡಿಸುವುದನ್ನು ಗೃಹ ಸಚಿವ
ಕೆ. ಬ್ರಹ್ಮಾನಂದ ರೆಡ್ಡಿ ಅವರು ನಿರಾಕರಿಸುತ್ತಿ ದ್ದಂತೆ ಇಂದು ಇಡೀ ಲೋಕಸಭೆಯು ಗಲಭೆ–ಗೊಂದಲಗಳಲ್ಲಿ ಮುಳುಗಿಹೋಯಿತು.
ಸಿಬಿಐ ವರದಿಯ ಕಾಗದಪತ್ರಗಳನ್ನು ಮಂಡಿಸದಿದ್ದರೆ ಸಭೆಯ ಕಲಾಪ
ಮುಂದುವರಿಸುವುದಕ್ಕೆ ಅವಕಾಶ ಕೊಡುವುದೇ ಇಲ್ಲ ಎಂದು ವಿರೋಧ ಪಕ್ಷಗಳ ಸದಸ್ಯರು ಬೆದರಿಕೆ ಹಾಕಿದರು.
ಟಿ.ಮೋಹನರಾಂ ಅವರನ್ನು ಯಜ್ಞಪಶುವನ್ನಾಗಿ ಮಾಡಿಕೊಂಡ ಸರ್ಕಾರವು ಭ್ರಷ್ಟಾಚಾರಿ ಸಚಿವರಿಗೆ ರಕ್ಷಣೆ ನೀಡುತ್ತಿರುವುದೆಂದು ವಿರೋಧ ಪಕ್ಷಗಳ ಸದಸ್ಯರು ಆಪಾದಿಸಿದರು. ಇದರಿಂದ ಸಭೆಯ
ಘನತೆ ಕೂಡ ಕುಗ್ಗಿರುವುದೆಂದೂ
ಬಣ್ಣಿಸಿದರು.
ಒಂದು ಘಟ್ಟದಲ್ಲಿ ಇಡೀ ವಿರೋಧ ಪಕ್ಷಗಳ ಸದಸ್ಯರ ಪೈಕಿ ಅರ್ಧದಷ್ಟು ಮಂದಿ ಪ್ರತಿಭಟನೆ ಸೂಚಿಸಲು ತಮ್ಮ ತಮ್ಮ ಆಸನಗಳಿಂದ ಎದ್ದು ನಿಂತರು. ಈ ಪೈಕಿ ಮಧುಲಿಮಯೆ, ಎಸ್.ಎನ್. ಮಿಶ್ರಾ,
ಅಟಲ್ ಬಿಹಾರಿ ವಾಜಪೇಯಿ, ಪೀಲೂ ಮೋದಿ, ಎಸ್.ಎಂ. ಬ್ಯಾನರ್ಜಿ, ಹಿರೇನ್ ಮುಖರ್ಜಿ, ಜ್ಯೋತಿರ್ಮಯಿ ಬಸು ಮತ್ತು ಸಮರ ಗುಹಾ ಅವರು ಉದ್ರಿಕ್ತರಾಗಿದ್ದ ರಲ್ಲದೆ ತಮ್ಮ ತಮ್ಮ ವಾದ ಮಂಡಿಸುವುದರಲ್ಲಿ ತಲ್ಲೀನರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.