ಕರ್ನಾಟಕ ಮಹಾರಾಷ್ಟ್ರ ವಿಲೀನ | ಗಡಿವಿವಾದಕ್ಕೆ ವಿನೋಬಾ ಸಲಹೆ
ವರ್ಧಾ, ಜುಲೈ 27– ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ವಿಲೀನಗೊಳಿಸಿ ದ್ವಿಭಾಷಾ ರಾಜ್ಯವೊಂದನ್ನು ಸೃಷ್ಟಿಸುವ ಮೂಲಕ ಈ ಎರಡು ರಾಜ್ಯಗಳ ನಡುವಣ ಗಡಿವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಬಹುದು ಎಂದು ಸರ್ವೋದಯ ನಾಯಕ ಆಚಾರ್ಯ ವಿನೋಬಾಭಾವೆಯವರು ಅಭಿಪ್ರಾಯಪಟ್ಟಿದ್ದಾರೆ.
ವಿಲೀನ ಸಾಧ್ಯವಾಗದಿದ್ದರೆ, ಮಹಾರಾಷ್ಟ್ರ ಸರ್ಕಾರ ಬೆಳಗಾವಿ ತೆಗೆದುಕೊಂಡು ಇಡೀ ಸೊಲ್ಲಾಪುರ ಜಿಲ್ಲೆಯನ್ನು ಕರ್ನಾಟಕಕ್ಕೆ ನೀಡಬೇಕೆಂದು ಬದಲಿ ಪರಿಹಾರ ಮಾರ್ಗ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.