ADVERTISEMENT

50 ವರ್ಷಗಳ ಹಿಂದೆ | ಹಣದುಬ್ಬರ, ಕಪ್ಪುಹಣ ತಡೆಗೆ ಇನ್ನೂ ಹಲವು ಕ್ರಮ: ಚವಾಣ್‌

ಸೋಮವಾರ 22- 7-19 74

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 23:32 IST
Last Updated 21 ಜುಲೈ 2024, 23:32 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಹಣದುಬ್ಬರ, ಕಪ್ಪುಹಣ ತಡೆಗೆ ಇನ್ನೂ ಹಲವು ಕ್ರಮ: ಚವಾಣ್‌

ನವದೆಹಲಿ, ಜುಲೈ 21– ಹಣದುಬ್ಬರ ಮತ್ತು ಕಪ್ಪುಹಣ ತಡೆಗಟ್ಟಲು ಇನ್ನೂ ಕೆಲವು ಉಗ್ರಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಹಣಕಾಸು ಮಂತ್ರಿ ವೈ.ಬಿ. ಚವಾಣ್‌ ಅವರು ಇಂದು ಇಲ್ಲಿ ಸೂಚಿಸಿದರು.

ಎ.ಐ.ಸಿ.ಸಿ. ಅಧಿವೇಶನದಲ್ಲಿ ಆರ್ಥಿಕ ನೀತಿ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡುತ್ತಿದ್ದ ಚವಾಣ್‌ ಅವರು ಹಣದುಬ್ಬರ ಹಾಗೂ ಕಪ್ಪು ಹಣದ ತಡೆಗೆ ಸರಕಾರ ಸಮಗ್ರ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತವೆ. ಅದರೆ ಸಮಗ್ರ ಕಾರ್ಯಕ್ರಮಗಳನ್ನು ತತ್‌ಕ್ಷಣವೇ ಹೊರಗೆಡುವುದಿಲ್ಲ’ ಎಂದರು. 

ADVERTISEMENT

‘ಭಾರತೀಯ ಲೋಕದಳ’

ನವದೆಹಲಿ, ಜುಲೈ 21– ಭಾರತೀಯ ಲೋಕದಳ, ವಿರೋಧಪಕ್ಷಗಳ ವಿಲೀನದಿಂದ ಉದಯಿಸಲಿರುವ ಹೊಸಪಕ್ಷವಿದು.

ಭಾರತೀಯ ಕ್ರಾಂತಿದಳದ ಅಧ್ಯಕ್ಷ ಚರಣ್‌ಸಿಂಗ್‌ ಅವರು ಈ ನಿರ್ಧಾರವನ್ನು ಇಂದು ಇಲ್ಲಿ ಪ್ರಕಟಿಸಿದರು.

ಈ ಹೊಸಪಕ್ಷದ ಉದ್ಘಾಟನೆಯು ಆಗಸ್ಟ್‌ 14ರಂದು ರಾಜಧಾನಿಯಲ್ಲಿ ನಡೆಯುವುದು ಎಂದೂ ಅವರು ಹೇಳಿದರು. ವಿಲೀನವಾಗಲಿರುವ ಏಳು ವಿರೋಧಪಕ್ಷಗಳ ನಾಯಕರ ಹೊಸ ಪಕ್ಷದ ಧ್ವಜ ಹಾಗೂ ಚುನಾವಣೆ ಸಂಕೇತಗಳನ್ನು ಆಂಗೀಕರಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.