ನವದೆಹಲಿ, ಫೆ. 28– ಅಗಾಧ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸುತ್ತಿರುವ ಶ್ರೀಸಾಮಾನ್ಯನು, ಕೇಂದ್ರ ಹಣಕಾಸು ಸಚಿವ ಶ್ರೀ ವೈ.ಬಿ. ಚವಾಣರು 74–75ನೇ ಸಾಲಿನ ಮುಂಗಡ ಪತ್ರದಲ್ಲಿ ಸೂಚಿಸಿರುವ 212 ಕೋಟಿ ರೂ.ಗಳ ಹೊಸ ತೆರಿಗೆಯ ಭಾರಿ ಪೆಟ್ಟಿಗೆ ಒಳಗಾಗಿದ್ದಾನೆ.
ಅರ್ಥ ಸಚಿವರು ಸೂಚಿಸಿರುವ ಹೊಸ ತೆರಿಗೆ ಸಲಹೆಗಳಿಂದಾಗಿ ಇನ್ನು ಮುಂದೆ ಬಟ್ಟೆ, ಅಂಚೆಕಾರ್ಡು, ಕವರು, ತಂತಿ, ಟೆಲಿಫೋನ್, ಸಿಗರೇಟು, ಕಾಗದ ಮೊದಲಾದ ದಿನನಿತ್ಯದ ಎಲ್ಲ ವಸ್ತುಗಳಿಗೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಇಂದು ಸಂಸತ್ತಿನಲ್ಲಿ ಮಂಡಿಸಿದ ಮುಂಗಡ ಪತ್ರದಲ್ಲಿ ವಿಸ್ಕಿ, ಬ್ರಾಂದಿ, ಜಿನ್, ಮೋಟಾರ್ ವಾಹನಗಳು, ಸ್ಕೂಟರುಗಳು, ಟೆಲಿವಿಷನ್ ಸೆಟ್‌ಗಳು, ಸೂಪರ್‌ಫೈನ್, ಫೈನ್ ಹಾಗೂ ಮಧ್ಯಮ ದರ್ಜೆ ಬಟ್ಟೆ, ಏರ್ ಕಂಡೀಷನರುಗಳು, ರೆಫ್ರಿಜರೇಟರುಗಳು ಮೊದಲಾದವುಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.