ADVERTISEMENT

50 ವರ್ಷಗಳ ಹಿಂದೆ: ಮತ್ಸ್ಯ ರಕ್ಷಣೆಗೆ ಸಮಗ್ರ ವಿಧೇಯಕ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 19:27 IST
Last Updated 24 ಜೂನ್ 2024, 19:27 IST
<div class="paragraphs"><p>50 ವರ್ಷಗಳ ಹಿಂದೆ..</p></div>

50 ವರ್ಷಗಳ ಹಿಂದೆ..

   

ತಾಳ್ಮೆಯ ಮೂಲ ಔದಾರ್ಯ

ಬೆಂಗಳೂರು, ಜೂನ್ 24– ಇಂದು ಅನೇಕ ಕಷ್ಟಕಾರ್ಪಣ್ಯಗಳನ್ನು ಎದುರಿಸುತ್ತಿರುವ ಜನಸಾಮಾನ್ಯರ ತಾಳ್ಮೆಯ ಮೂಲ ಯಾವುದು? ಕಂದಾಯ ಮಂತ್ರಿ ಎನ್.ಹುಚ್ಚಮಾಸ್ತಿಗೌಡರ ಅಭಿಪ್ರಾಯದಲ್ಲಿ ‘ಇತರರ ಅಪರಾಧಗಳನ್ನು ಮರೆಯುವ’ ಔದಾರ್ಯ ಮತ್ತು ಕಷ್ಟಕ್ಕೆಲ್ಲಾ ತನ್ನ ‘ದುರದೃಷ್ಟ’ ಕಾರಣ ಎನ್ನುವ ಹತಾಶ ಭಾವನೆ. ಸರ್ಕಾರಗಳು ಉಳಿದಿರುವುದಕ್ಕೂ ಅದೇ ಕಾರಣ, ‘ಇಲ್ಲದಿದ್ದರೆ ದಂಗೆ ಏಳುತ್ತಿದ್ದರು’.

ADVERTISEMENT

ಮತ್ಸ್ಯ ರಕ್ಷಣೆಗೆ ಸಮಗ್ರ ವಿಧೇಯಕ ಶೀಘ್ರವೇ ಸಿದ್ಧ

ಹೊಸಪೇಟೆ, ಜೂನ್ 24– ಮತ್ಸ್ಯ ರಕ್ಷಣೆ, ಅಭಿವೃದ್ಧಿ ಹಾಗೂ ಈ ಉದ್ಯಮದ ನಿಯಂತ್ರಣಕ್ಕೆ ಶಾಸನೋಕ್ತ ಅವಕಾಶ ಕಲ್ಪಿಸಲು, ರಾಜ್ಯಕ್ಕೆಲ್ಲ ಅನ್ವಯವಾಗುವ ಸಮಗ್ರ ಸ್ವರೂಪದ ವಿಧೇಯಕವೊಂದು ಸಿದ್ಧವಾಗುತ್ತಿದೆ.

ಸರ್ಕಾರದ ಅನುಮತಿಯಿಲ್ಲದೇ ಮೀನುಗಾರಿಕೆ ನಿಷೇಧ, ವಿಷ ಹಾಗೂ ಸ್ಫೋಟಕ ವಸ್ತುಗಳಿಂದ ಮತ್ಸ್ಯ ನಾಶಕ್ಕೆ ನಿರ್ಬಂಧ, ಸಾರ್ವಜನಿಕ ಕೊಳ, ಜಲಾಶಯಗಳಿಂದ ಮೀನು ಹಿಡಿಯಲು ಸರ್ಕಾರಿ ಪರವಾನಗಿ ವ್ಯವಸ್ಥೆ ಮುಂತಾದ ವಿಧಿಗಳು ವಿಧೇಯಕದಲ್ಲಿವೆ ಎಂದು ಮತ್ಸ್ಯ ವ್ಯವಸಾಯ ಹಾಗೂ ತೋಟಗಾರಿಕೆ ಇಲಾಖೆ ರಾಜ್ಯ ಮಂತ್ರಿ ಕೆ.ಟಿ. ರಾಠೋಡ್ ಅವರು ವರದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.