ADVERTISEMENT

50 ವರ್ಷಗಳ ಹಿಂದೆ ಈ ದಿನ: ಹಾಸನ ಜಿಲ್ಲೆಯಲ್ಲಿ ಭೀಕರ ಪರಿಸ್ಥಿತಿ

ಪ್ರಜಾವಾಣಿ ವಿಶೇಷ
Published 25 ಜೂನ್ 2024, 19:16 IST
Last Updated 25 ಜೂನ್ 2024, 19:16 IST
<div class="paragraphs"><p>50 ವರ್ಷಗಳ ಹಿಂದೆ ಈ ದಿನ</p></div>

50 ವರ್ಷಗಳ ಹಿಂದೆ ಈ ದಿನ

   

ವಿಧಾನಪರಿಷತ್ತಿನ ನಾಲ್ಕು ಕ್ಷೇತ್ರಗಳಲ್ಲೂ ಕಾಂಗ್ರೆಸ್ಸಿಗೆ ಸೋಲು

ಬೆಂಗಳೂರು, ಜೂನ್‌ 25– ವಿಧಾನಪರಿಷತ್ತಿನ ಎರಡು ಪದವೀಧರ ಹಾಗೂ ಎರಡು ಅಧ್ಯಾಪಕರ ಕ್ಷೇತ್ರಗಳಿಂದ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ತನ್ನ ಒಂದು ಸ್ಥಾನವನ್ನು ಕಳೆದುಕೊಳ್ಳುವುದರ ಜೊತೆಗೆ ಉಳಿದ ಮೂರು ಕ್ಷೇತ್ರಗಳಲ್ಲೂ ಪರಾಜಯ ಹೊಂದಿದೆ.

ADVERTISEMENT

ಜನಸಂಘ ಹಾಗೂ ಅದರ ಬೆಂಬಲ ಪಡೆದ ಅಭ್ಯರ್ಥಿಗಳು ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ.

ಆಡಳಿತ ಕಾಂಗ್ರೆಸ್ಸಿನ ಒಂದು ಸ್ಥಾನವನ್ನು ಸಂಸ್ಥಾ ಕಾಂಗ್ರೆಸ್‌ ಕಸಿದು ಒಟ್ಟು ಎರಡು ಸ್ಥಾನಗಳನ್ನು ಪಡೆದಿದೆ.

ಹಾಸನ ಜಿಲ್ಲೆಯಲ್ಲಿ ಭೀಕರ ಪರಿಸ್ಥಿತಿ

ಬೆಂಗಳೂರು, ಜೂನ್‌ 25– ಮುಂಗಾರು ಮಳೆ ಇಲ್ಲ, ಬೆಳೆಯೂ ಇಲ್ಲ. ಆಷಾಢ
ಮಾಸದಲ್ಲೂ ಕುಡಿಯುವ ನೀರಿಗೆ ಅಭಾವ.

ಕರ್ನಾಟಕದ ಹಳೆಯ ಮೈಸೂರಿನ ಬಹುತೇಕ ಪ್ರದೇಶ, ಅದರಲ್ಲೂ ಹಾಸನ ಜಿಲ್ಲೆಯಲ್ಲಿ ಈ ‘ಭೀಕರ’ ಪರಿಸ್ಥಿತಿ.

ಈ ಪರಿಸ್ಥಿತಿ ಹತೋಟಿ ಮೀರುವ ಮುನ್ನವೇ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿರೋಧ ಪಕ್ಷದ ನಾಯಕ ಎಚ್‌.ಡಿ. ದೇವೇಗೌಡ ಅವರು ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.