ADVERTISEMENT

50 ವರ್ಷಗಳ ಹಿಂದೆ: ಲೈಸೆನ್ಸ್ ದುರುಪಯೋಗ ತಡೆಗೆ ಕಾಂಟ್ರಾಕ್ಟ್ ಬಸ್ಸು ರಾಷ್ಟ್ರೀಕರಣ

​ಪ್ರಜಾವಾಣಿ ವಾರ್ತೆ
Published 5 ಜೂನ್ 2024, 0:09 IST
Last Updated 5 ಜೂನ್ 2024, 0:09 IST
50 ವರ್ಷಗಳ ಹಿಂದೆ..
50 ವರ್ಷಗಳ ಹಿಂದೆ..   

ಬೆಂಗಳೂರು, ಜೂನ್ 4: ಖಾಸಗಿ ಬಸ್ಸು ಮಾಲೀಕರು ಕಾಂಟ್ರಾಕ್ಟ್ ಬಸ್ಸು ಪರವಾನಗಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಸಾರಿಗೆ ಸಚಿವ ಕೆ.ಎಚ್.ರಂಗನಾಥ್ ಅವರು ಇಂದು ವಿಧಾನಪರಿಷತ್ತಿನಲ್ಲಿ ತಿಳಿಸಿದರು.

ಗೋವಿಂದ ಪಿ. ಒಡೆಯರಾಜ್ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಅದಕ್ಕಾಗಿ ಕಾಂಟ್ರಾಕ್ಟ್ ಬಸ್ಸುಗಳನ್ನು ರಾಷ್ಟ್ರೀಕರಣ ಮಾಡುವ ಯೋಚನೆ ಇದೆ ಎಂದರು.

‘ಪೂರ್ವನಿಯೋಜಿತ ನಾಟಕ’: ವ್ಯಂಗ್ಯ

ADVERTISEMENT

ಬೆಂಗಳೂರು, ಜೂನ್ 4: ನೂತನ ಮೇಯರ್ ಮತ್ತು ಉಪಮೇಯರ್ ಚುನಾವಣೆ ನಡೆಸದೆ ನಿನ್ನೆ ಹುಬ್ಬಳ್ಳಿ–ಧಾರವಾಡ ಕಾರ್ಪೊರೇಷನ್ ಸಭೆಯನ್ನು ಮುಂದೂಡಿರುವುದು ‘ಪೂರ್ವ ನಿಯೋಜಿತ’ ಎಂದು ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕ ರಾಮಕೃಷ್ಣ ಹೆಗಡೆ ಆಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.