ADVERTISEMENT

50 ವರ್ಷಗಳ ಹಿಂದೆ | ಅತಿ ನಿದ್ರೆ ಚಿಂತೆಗಳ ಚಿಹ್ನೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 23:40 IST
Last Updated 5 ನವೆಂಬರ್ 2024, 23:40 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ನವದೆಹಲಿ, ನ. 5– ಅತಿ ನಿದ್ರೆ ಮಾಡುವವರಿಗೆ, ಅಂದರೆ ಒಂಬತ್ತು ಗಂಟೆಗೂ ಹೆಚ್ಚು ಕಾಲ ನಿದ್ರೆ ಮಾಡುವವರಿಗೆ, ಚಿಂತೆ ಮತ್ತು ನಿರುತ್ಸಾಹದ ಕಾಟ ಜಾಸ್ತಿ.

ಯೇಲ್ ವಿಶ್ವವಿದ್ಯಾಲಯದ ಅಮೆರಿಕನ್‌ ಸಂಶೋಧಕರ ದೃಷ್ಟಿಯಲ್ಲಿ, ಒಬ್ಬರು ನಿದ್ರೆ ಮಾಡುವ ಕಾಲ ಅವರವರ ಮಾನಸಿಕ ಸ್ಥಿತಿಯನ್ನವಲಂಬಿಸಿರುತ್ತದೆ.

ಕನಸು ಬೀಳುವವರು ಮತ್ತು ಕನಸು ಬೀಳದವರನ್ನು ವಿಂಗಡಿಸಿ ವೈದ್ಯರು ಎರಡು ಬಗೆಯ ನಿದ್ರೆಗಳ ಕುರಿತು ಅಧ್ಯಯಿಸಿದರು.

ADVERTISEMENT

ಆರು ಗಂಟೆ ಕಾಲಕ್ಕೂ ಕಡಿಮೆ ನಿದ್ರೆ ಮಾಡುವವರಲ್ಲಿ ನೆಮ್ಮದಿ, ದಕ್ಷತೆ ಮತ್ತು ತಮ್ಮ ಮೇಲೆ ಹತೋಟಿ ಇರುವುದೆಂದು ಅವರ ಅಭಿಪ್ರಾಯ.

ಕನಸು ಬೀಳುವ ನಿದ್ರೆಯಲ್ಲಿ ಜನರು ತಮ್ಮ ಸುಪ್ತಪ್ರಜ್ಞೆ ಜತೆ ಸಂಪರ್ಕ ಬೆಳೆಸಿಕೊಂಡು ತಮ್ಮ ಸಮಸ್ಯೆಗಳನ್ನು ಬಿಡಿಸಿಕೊಳ್ಳುತ್ತಾರೆ. ಇದನ್ನು ಅವರು ಒಬ್ಬ ಮನೋ ವಿಶ್ಲೇಷಕ ತಜ್ಞನ ಜತೆ ಸಮಾಲೋಚಿಸಿದ ಅನುಭವಕ್ಕೆ ಹೋಲಿಸಬಹುದು. ತೊಂದರೆಗಳು ಕಾಡುತ್ತಿರುವ ಜನರಿಗೆ ಇಂತಹ ಚಿಕಿತ್ಸೆ ಅಗತ್ಯ. ಆದ್ದರಿಂದಲೇ ಅವರು ಹೆಚ್ಚುಕಾಲ ನಿದ್ರೆ ಮಾಡುತ್ತಿರುವಂತಾಗುತ್ತದೆ.

ತುರ್ತು ಹಣ ಬಳಸದಿದ್ದರೆ ಭೀಕರ ಆಹಾರ ಸಮಸ್ಯೆ

ರೋಮ್, ನ. 5– ಸುಮಾರು ಎರಡು ಕೋಟಿ ಧಾನ್ಯ ಮತ್ತು 10 ಲಕ್ಷ ಟನ್‌ ಸೀಮೆಗೊಬ್ಬರದ ಕೊರತೆ ತುಂಬಲು ಮುಂದಿನ ಆರು ತಿಂಗಳಲ್ಲಿ 400–500 ಕೋಟಿ ಡಾಲರುಗಳನ್ನು ವೆಚ್ಚ ಮಾಡದಿದ್ದರೆ, ವಿಶ್ವದಲ್ಲಿ 1945ರಿಂದ ಈಚೆಗೆ ಕಾಣದಿದ್ದಂತಹ ಅತ್ಯಂತ ತೀವ್ರವಾದ ಆಹಾರ ಅಭಾವ ತಲೆದೋರುವುದೆಂದು 25 ಜನ ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಎಚ್ಚರಿಕೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.