ADVERTISEMENT

50 ವರ್ಷಗಳ ಹಿಂದೆ: ವರಕವಿ ಬೇಂದ್ರೆ ಅವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಿಕೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 0:25 IST
Last Updated 9 ನವೆಂಬರ್ 2024, 0:25 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ನ್ಯಾಯಬೆಲೆಗೆ ಕಾಗದ– ರಟ್ಟಿನ ಮಾರಾಟಕ್ಕೆ ಕೇಂದ್ರ ಸಂಸ್ಥೆ?

ನವದೆಹಲಿ, ನ. 8– ದೇಶದಲ್ಲಿ ತಯಾರಾಗುವ ಎಲ್ಲ ಕಾಗದ ಹಾಗೂ ಕಾಗದ ರಟ್ಟನ್ನು ನ್ಯಾಯಬೆಲೆಯಲ್ಲಿ ವಿತರಣೆ ಮಾಡುವ ಕೇಂದ್ರ ಮಾರಾಟ ಸಂಸ್ಥೆ ರಚಿಸುವ ಸಾಧ್ಯತೆಯನ್ನು ಕೇಂದ್ರ ಕೈಗಾರಿಕಾ ಖಾತೆ ಪರಿಶೀಲಿಸುತ್ತಿದೆ.

ಕಾಗದ ವ್ಯಾಪಾರ ಹಾಗೂ ಕಾಗದ ಕಾರ್ಖಾನೆಗಳಲ್ಲಿ ಕಾಗದ ಮಾರಾಟ ಸಂಬಂಧದ ಅಕ್ರಮಗಳು ನಿತ್ಯದ
ವ್ಯವಹಾರಗಳಾಗಿಬಿಟ್ಟಿವೆ ಎಂದು ಸರ್ಕಾರ ಭಾವಿಸಿದೆ.

ADVERTISEMENT

ಕಾಗದದ ಭಾರಿ ಮಾರಾಟಗಾರರು ಅಧಿಕೃತ ದರಕ್ಕಿಂತ ಹೆಚ್ಚು ಹಣವನ್ನು ಪಡೆಯುತ್ತಾರೆ. ಮಾರಾಟ ರಸೀದಿಯಲ್ಲಿ ನಮೂದಿಸುವುದಕ್ಕಿಂತ ಹೆಚ್ಚಿನ ಹಣವನ್ನು ವಸೂಲು ಮಾಡುವ ಮೂಲಕ ಚಿಲ್ಲರೆ ವರ್ತಕರು ಭಾರವನ್ನು ಬಳಕೆದಾರನ ಮೇಲೆ ರವಾನಿಸುತ್ತಾರೆ ಎನ್ನಲಾಗಿದೆ.

ವರಕವಿ ಬೇಂದ್ರೆ ಅವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಿಕೆ

ನವದೆಹಲಿ, ನ. 8– ಕನ್ನಡದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಮತ್ತು ಒರಿಯಾದ ಕಾದಂಬರಿಕಾರ ಗೋಪಿನಾಥ ಮೊಹಂತಿ ಅವರಿಗೆ 1973ನೇ ಸಾಲಿನ ಜ್ಞಾನಪೀಠ ಸಾಹಿತ್ಯ ಪ್ರಶಸ್ತಿಯನ್ನು ಇಂದು ಇಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.