ADVERTISEMENT

50 ವರ್ಷಗಳ ಹಿಂದೆ | ಕುಗ್ಗಿದ್ದ ಮುಂಗಾರು: ಭತ್ತ ಸಂಗ್ರಹ ಮತ್ತೆ ಚುರುಕು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 22:44 IST
Last Updated 14 ನವೆಂಬರ್ 2024, 22:44 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಕುಗ್ಗಿದ್ದ ಮುಂಗಾರು; ಭತ್ತ ಸಂಗ್ರಹ ಮತ್ತೆ ಚುರುಕು

ನವದೆಹಲಿ, ನ. 14– ಮುಂಗಾರು ಧಾನ್ಯಗಳ, ವಿಶೇಷತಃ ಭತ್ತದ ಸಂಗ್ರಹ ಮೊದಮೊದಲು ನಿರಾಶೆ ಹುಟ್ಟಿಸುವಂತಿದ್ದಿತಾದರೂ ಈಗ ಅದು ರಾಷ್ಟ್ರದಾದ್ಯಂತ ಚುರುಕುಗೊಂಡಿರುವುದಾಗಿ ಕೃಷಿ ಮತ್ತು ನೀರಾವರಿ ಖಾತೆ ರಾಜ್ಯ ಸಚಿವ ಎ.ಪಿ. ಶಿಂಧೆ ಇಂದು ತಿಳಿಸಿದ್ದಾರೆ.

ನಿನ್ನೆಯವರೆಗೆ ಭತ್ತದ ಸಂಗ್ರಹ 28 ಲಕ್ಷ ಟನ್ ಆಗಿತ್ತು. ಮುಂಗಾರು ಬೆಳೆಯ ಪ್ರಮುಖ ಪ್ರದೇಶಗಳಲ್ಲಿ ಅನಾವೃಷ್ಟಿ ಮತ್ತು ಪ್ರವಾಹದ ಕಾರಣ ಧಾನ್ಯ ಸಂಗ್ರಹ ‘ಬಹಳ ಕಡಿಮೆ’ ಪ್ರಮಾಣದಲ್ಲಾಗುವುದೆಂಬ ಹೆದರಿಕೆ ಈಚಿನ ಕೆಲವು ವಾರಗಳವರೆಗೆ ಇತ್ತೆಂದು ಸಚಿವರು ತಿಳಿಸಿದರು.

ADVERTISEMENT

ನಗರದಲ್ಲಿ ರಷ್ಯಾ ಅಂತರಿಕ್ಷ ನೌಕೆ ಮಾದರಿಗಳ ಪ್ರದರ್ಶನ

ಬೆಂಗಳೂರು, ನ. 14– ಪ್ರಪ್ರಥಮ ಮಾನವ ನಿರ್ಮಿತ ಉಪಗ್ರಹ ‘ಸ್ಪೂಟ್ನಿಕ್’ನಿಂದ ಇತ್ತೀಚಿನ ಬಾಹ್ಯಾಕಾಶ ಸಂಶೋಧನೆಗಳವರೆಗೆ ರಷ್ಯದ ಬಾಹ್ಯಾಕಾಶ ವಿಜ್ಞಾನ ಪ್ರಗತಿಯನ್ನು ಪರಿಚಯ ಮಾಡಿಕೊಡುವ ಚಿತ್ರ, ಮಾದರಿಗಳಿಂದ ಕೂಡಿದ ಒಂದು ತಿಂಗಳ ಪ್ರದರ್ಶನವೊಂದು ಇಂದಿನಿಂದ ನಗರದ ಲಾಲ್‌ಬಾಗ್ ಗಾಜಿನ ಮನೆಯಲ್ಲಿ ಪ್ರಾರಂಭವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.