ADVERTISEMENT

50 ವರ್ಷಗಳ ಹಿಂದೆ: ಸುಗ್ರೀವಾಜ್ಞೆಗಳ ಬಗೆಗೆ ಪ್ರಧಾನಿ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 19:50 IST
Last Updated 11 ಜುಲೈ 2024, 19:50 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಸುಗ್ರೀವಾಜ್ಞೆಗಳ ಬಗೆಗೆ ಪ್ರಧಾನಿ ಸಮರ್ಥನೆ

ಬೆಂಗಳೂರು, ಜುಲೈ 11– ಕೆಲಸಗಾರರ ದೀರ್ಘಾವಧಿ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಅವರ ಹೆಚ್ಚಿನ ಆದಾಯದ ಕೆಲಭಾಗದ ಚಲಾವಣೆಯನ್ನು ಸ್ತಂಭನಗೊಳಿಸಲಾಗಿದೆಯೆಂದು ಪ್ರಧಾನಿ ಇಂದಿರಾ ಗಾಂಧಿ ಸುಗ್ರೀವಾಜ್ಞೆಗಳನ್ನು ಇಂದು ಇಲ್ಲಿ ಸಮರ್ಥಿಸಿದರು. ಹೆಚ್ಚಿನ ವೇತನ ಮತ್ತು ಭತ್ಯದ ಒಂದು ಭಾಗವನ್ನು ಠೇವಣಿ ಇಡುವುದರಿಂದ ಕೆಲಸಗಾರರ ಸಾಮಾನ್ಯ ವೇತನ, ಭತ್ಯ ಏರಿಕೆಗೆ ಆತಂಕವಿಲ್ಲವೆಂದು ಸ್ಪಷ್ಟಪಡಿಸಿದರು.

ಕಲಬೆರಕೆ: ಈಗ ಸೋಪಿನ ಸರದಿ

ADVERTISEMENT

ನವದೆಹಲಿ, ಜುಲೈ 11– ಕಲಬೆರಕೆಯಲ್ಲಿ ಈಗ ಸೋಪಿನ ಸರದಿ. ಇತ್ತೀಚೆಗೆ ಮಾರು
ಕಟ್ಟೆಯಲ್ಲಿ ಕಲಬೆರಕೆ ಸೋಪು ಕಂಡುಬಂದಿದ್ದು ಇದರಿಂದ ಬಳಕೆದಾರರಿಗೆ ಚರ್ಮರೋಗ ಕಾಣಿಸಿಕೊಂಡಿದೆ. ಅಲ್ಲದೆ ಸರ್ಕಾರದ ಬೊಕ್ಕಸಕ್ಕೂ ನಷ್ಟ ಉಂಟಾಗಿದೆಯೆಂದು ಭಾರತ ಬಳಕೆದಾರರ ಮಂಡಳಿ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.