ADVERTISEMENT

50 ವರ್ಷಗಳ ಹಿಂದೆ | ಮುಷ್ಕರಗಳ ಸರಣಿ: ಫರ್ನಾಂಡಿಸ್ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 18:38 IST
Last Updated 7 ಜುಲೈ 2024, 18:38 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಜನಜಾಗೃತಿಗಾಗಿ ಸತ್ಯಾಗ್ರಹಿಗಳ ತಂಡ ರಚಿಸಲು ಪಿ.ಸಿ. ಸೆನ್ ಕರೆ

ಬೆಂಗಳೂರು, ಜುಲೈ 7– ಭ್ರಷ್ಟಾಚಾರ ಹಾಗೂ ಅಕ್ರಮ ಸರ್ಕಾರಗಳ ವಿರುದ್ಧ ಜನತೆಯನ್ನು ಜಾಗೃತಗೊಳಿಸಿ ಸಾಮೂಹಿಕ ಹೋರಾಟ ನಡೆಸಲು ಸತ್ಯಾಗ್ರಹಿಗಳ ತಂಡಗಳನ್ನು ತಯಾರು ಮಾಡಬೇಕೆಂದು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಶ್ರೀ ಪಿ.ಸಿ. ಸೆನ್ ಅವರು ಇಂದು ಇಲ್ಲಿ ಸಂಸ್ಥಾ ಕಾಂಗ್ರೆಸ್ಸಿನ ಕಾರ್ಯಕರ್ತರಿಗೆ ಕರೆ ನೀಡಿದರು.

ಇಂದು ದೇಶದಲ್ಲಿ ಎಲ್ಲಿ ನೋಡಿದರೂ ಅಶಾಂತಿ, ಅನ್ಯಾಯ, ಭ್ರಷ್ಟಾಚಾರ, ಆರ್ಥಿಕ ಬಿಕ್ಕಟ್ಟು, ಆಹಾರ ಧಾನ್ಯ ಅಭಾವವೇ ತಾಂಡವ
ವಾಡುತ್ತಿದೆ ಎಂದೂ, ಆ ಪರಿಸ್ಥಿತಿಯಿಂದ ದೇಶವನ್ನು ರಕ್ಷಿಸಲು ಗಾಂಧಿ ತತ್ವಗಳಲ್ಲಿ ನಂಬಿಕೆ, ಶ್ರದ್ಧೆ ಹೊಂದಿರುವ ಜನರ ಅಗತ್ಯ ಬಹಳವಾಗಿದೆ ಎಂದೂ ಅವರು ನುಡಿದರು.

ADVERTISEMENT

ಮುಷ್ಕರಗಳ ಸರಣಿ: ಫರ್ನಾಂಡಿಸ್ ಬೆದರಿಕೆ

ನವದೆಹಲಿ, ಜುಲೈ 7– ಹೆಚ್ಚುವರಿ ವೇತನ ಮತ್ತು ತುಟ್ಟಿಭತ್ಯೆಯನ್ನು ಕಡ್ಡಾಯವಾಗಿ ಠೇವಣಿಯಲ್ಲಿಡಬೇಕೆಂಬ ಸರ್ಕಾರದ ಸುಗ್ರೀವಾಜ್ಞೆ ವಿರುದ್ಧ ಹೋರಾಡಲು ಮುಷ್ಕರಗಳ ಸರಣಿ ಪ್ರಾರಂಭವಾಗುವುದೆಂದು ಅಖಿಲ ಭಾರತ ರೈಲ್ವೆ ನೌಕರರ ಫೆಡರೇಷನ್‌ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಅವರು ಇಂದು ಇಲ್ಲಿ ತಿಳಿಸಿದರು.

ರೈಲ್ವೆ ನೌಕರರ ಸಮಸ್ಯೆಗಳನ್ನು ಚರ್ಚಿಸಲು ಈ ತಿಂಗಳ 20 ಮತ್ತು 21ರಂದು ಇಲ್ಲಿ ನಡೆಯಲಿರುವ ಕಾರ್ಮಿಕ ಸಂಘಟನೆಗಳ ಸಭೆ ಸುಗ್ರೀವಾಜ್ಞೆ ವಿರೋಧಿಸಲು ಮಾರ್ಗಗಳನ್ನೂ ಪರಿಶೀಲಿಸುವುದೆಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.