ADVERTISEMENT

50 ವರ್ಷಗಳ ಹಿಂದೆ | ಲಿಂಗನಮಕ್ಕಿ: ನಿರೀಕ್ಷಿಸಿದಂತೆ ನೀರು ತುಂಬದೆ ಮತ್ತೆ ಆತಂಕ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 22:24 IST
Last Updated 8 ಜುಲೈ 2024, 22:24 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಭಾರತದ ಪ್ರಥಮ ಉಪಗ್ರಹ ನಗರದಲ್ಲಿ ಈಗ ಸಿದ್ಧ

ಬೆಂಗಳೂರು, ಜುಲೈ 8– ಡಿಸೆಂಬರ್‌ ತಿಂಗಳಿನಲ್ಲಿ ರಷ್ಯದ ನೆಲೆಯೊಂದರಿಂದ ಹಾರಿಬಿಡಲಾಗುವ ಭಾರತದ ಉಪಗ್ರಹ ಇಲ್ಲಿ ಬಹುಮಟ್ಟಿಗೆ ಸಿದ್ಧವಾಗಿದೆ.

ಈವರೆಗೆ ಗಗನಕ್ಕೆ ಹೋಗಿರುವ ಆರೇಳು ರಾಷ್ಟ್ರಗಳ ಸುಮಾರು ಮುನ್ನೂರು ಉಪಗ್ರಹಗಳು ಸಂಗ್ರಹಿಸಿರುವ ಅಂಕಿ ಅಂಶಗಳಿಗಿಂತಲೂ ಹೊಸದಾದ ಅಂಕಿ ಅಂಶಗಳನ್ನು ಭಾರತದ ಉಪಗ್ರಹದ ಮೂಲಕ ಸಂಗ್ರಹಿಸುವ ಉದ್ದೇಶ ಹೊಂದಲಾಗಿದೆ ಎಂದು ತುಮಕೂರು
ರಸ್ತೆಯ ಪೀಣ್ಯದ ‘ಇಸ್ರೊ’ ಡೈರೆಕ್ಟರ್ ಡಾ.ಯು.ಆರ್. ರಾವ್‌ರವರು ತಿಳಿಸಿದರು.

ADVERTISEMENT

ಲಿಂಗನಮಕ್ಕಿ: ನಿರೀಕ್ಷಿಸಿದಂತೆ ನೀರು ತುಂಬದೆ ಮತ್ತೆ ಆತಂಕ

ಬೆಂಗಳೂರು, ಜುಲೈ 8– ಮಳೆ ಸುಮಾರಾಗಿ ಬರುತ್ತಿದೆಯಾದರೂ ಲಿಂಗನಮಕ್ಕಿ ಜಲಾಶಯದಲ್ಲಿ ನೀರು ನಿರೀಕ್ಷಿತ ಪ್ರಮಾಣದಲ್ಲಿ ತುಂಬುತ್ತಿಲ್ಲ ಎಂಬುದು ಮತ್ತೆ ಆತಂಕದ ವಿಷಯವಾಗಿದೆ. ನಿನ್ನೆ ಸಂಜೆಯಿಂದ ಇಂದು ಬೆಳಗಿನವರೆಗೆ ಸುಮಾರು ಐದೂವರೆ ಅಡಿಗಳಷ್ಟು ನೀರು ತುಂಬಿದರೂ ಬೆಳಗಿನಿಂದ ಸಂಜೆವರೆಗೆ ಜಲಾಶಯಕ್ಕೆ ಹರಿದ ನೀರು ಅರ್ಧ ಅಡಿ ಎತ್ತರದಷ್ಟು ಮಾತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.