ADVERTISEMENT

50 ವರ್ಷದ ಹಿಂದೆ: ‘ಪ್ರಾಮಾಣಿಕತೆ ಬ್ಯಾಂಕ್’

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 0:02 IST
Last Updated 15 ಅಕ್ಟೋಬರ್ 2024, 0:02 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

‘ಪ್ರಾಮಾಣಿಕತೆ ಬ್ಯಾಂಕ್’

ಕೊಚ್ಚಿ, ಅ. 14– ಜನಬಾಹುಳ್ಯದ ಪಟ್ಟಣದಲ್ಲಿ ನಿಮ್ಮ ಹಣ ಪಿಕ್‌ಪಾಕೆಟ್‌ ಆದರೆ ನೀವು ಯಾರ ಸಹಾಯವನ್ನು ಯಾಚಿಸುತ್ತೀರಿ? ಬೇರೊಬ್ಬರನ್ನು ಸಹಾಯಕ್ಕಾಗಿ ಯಾಚಿಸುವುದೆಂದರೆ ಮರ್ಯಾದಸ್ತ ನಾಗರಿಕರಿಗೆ ತುಂಬಾ ಪೇಚಿನ ಪ್ರಸಂಗ. ಇಂತಹ ಪ್ರಸಂಗಗಳು ಅಪರೂಪವಲ್ಲವೆಂದು ಕಂಡುಕೊಂಡ ಕೇರಳದ ಪೊಲೀಸರು ಕೊಚ್ಚಿಯಲ್ಲಿನ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲೊಂದು ಪ್ರಾಮಾಣಿಕತೆಯ ಬ್ಯಾಂಕು ಸ್ಥಾಪಿಸಿದ್ದಾರೆ.

ಈ ಸಣ್ಣ ಬ್ಯಾಂಕಿನ ಕಾರ್ಯನಿರ್ವಹಣೆಯು ತೀರಾ ಭಿನ್ನ. ಸರಳವಾದ ಜಗಲಿಯ ಮೇಲೆ, ಅಲ್ಲಿ ಪೊಲೀಸ್ ಪೇದೆಯ ಮೂರ್ತಿಯೊಂದಿದೆ. ಅದರ ಮೇಲೆ ‘ನಿಮ್ಮ ಪ್ರಾಮಾಣಿಕತೆಯಲ್ಲಿ ನಮಗೆ ನಂಬಿಕೆಯಿದೆ’ ಎಂಬ ಬರಹವಿದೆ. ಈ ಮೂರ್ತಿ ಎರಡು ಜೇಬುಗಳನ್ನು ಹೊಂದಿದ್ದು, ಅವೆರಡೂ ಹಣದ ಚೀಲಗಳು. ಬಲಗಡೆ ಜೇಬಿನಲ್ಲಿರುವ ಹಣವನ್ನು ನಿಜವಾಗಿಯೂ ಹಣದ ಅವಶ್ಯಕತೆಯಿರುವವರು ತೆಗೆದುಕೊಳ್ಳಬಹುದು. ಎಡಗಡೆಯ ಜೇಬಿನಲ್ಲಿ ಸಾರ್ವಜನಿಕರು ತಮಗೆ ಇಷ್ಟಬಂದಷ್ಟು ಹಣವನ್ನು ಹಾಕಬಹುದಲ್ಲದೆ, ಬಲಗಡೆಯ ಜೇಬಿನಿಂದ ಹಣವನ್ನು ಪಡೆದು ಉಪಯೋಗಿಸಿದವರು ಕೂಡಾ ಆ ಹಣವನ್ನು ಹಿಂದಿರುಗಿಸಲು ಅದರಲ್ಲಿ ಹಾಕಬಹುದು.

ADVERTISEMENT

ಈ ಪ್ರಾಮಾಣಿಕತೆಯ ಬ್ಯಾಂಕಿನ ನೆರವನ್ನು ಪಡೆಯಲು ಇಚ್ಛಿಸುವವರಿಗೆ ಸಹಾಯ ಮಾಡಲು ಅಲ್ಲೊಬ್ಬ ಪೊಲೀಸ್ ಪೇದೆ ಕೂಡಾ ಇರುತ್ತಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.