ನವದೆಹಲಿ, ಆ. 26– ವರ್ತಕರು ಗೂಡ್ಸ್ ವ್ಯಾಗನ್‌ಗಳಲ್ಲಿ ಮತ್ತು ಶೆಡ್‌ಗಳಲ್ಲಿ ಒಂದು ವಾರಕ್ಕಿಂತ ಹೆಚ್ಚು ಕಾಲ ತಡೆಹಿಡಿದಿಟ್ಟುಕೊಂಡಿರುವ ಅಗತ್ಯ ವಸ್ತುಗಳನ್ನು ಸೂಪರ್ ಬಜಾರ್ ಮತ್ತು ಸಹಕಾರ ಸಂಘಗಳ ಮೂಲಕ ಸಾರ್ವಜನಿಕರಿಗೆ ವಿತರಣೆ ಮಾಡಲಾಗುವುದು.
ಇದಕ್ಕಾಗಿ ರೈಲ್ವೆ ಶಾಸನದ ನಿಯಮಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ ಎಂದು ರೈಲ್ವೆ ಉಪಸಚಿವ ಮಹಮದ್ ಷಫಿ ಖುರೇಷಿ ಅವರು ಇಂದು ಲೋಕಸಭೆಯಲ್ಲಿ ಹರ್ಷ ಧ್ವನಿಗಳ ನಡುವೆ ತಿಳಿಸಿದರು.
ಎ.ಬಿ. ವಾಜಪೇಯಿ ಮತ್ತಿತರರ ಗಮನ ಸೆಳೆಯುವ ಸೂಚನೆಯೊಂದಕ್ಕೆ ಉತ್ತರ ನೀಡುತ್ತಿದ್ದ ಸಚಿವರು, ‘ಯಾವುದಕ್ಕೂ ಹೇಸದ ಈ ವರ್ತಕರು ಧಾನ್ಯಗಳನ್ನು ತಡೆಹಿಡಿದಿಟ್ಟುಕೊಂಡು ದರ ಏರಿಕೆ ಮತ್ತು ಅಭಾವಗಳಿಗೆ ಕಾರಣರಾಗುತ್ತಿದ್ದಾರೆ’ ಎಂಬ ಸದಸ್ಯರ ಕಳವಳ ಸಮರ್ಥನೀಯವಾದುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.