ADVERTISEMENT

50 ವರ್ಷಗಳ ಹಿಂದೆ: ಉತ್ತಮ ವರ್ಗದ್ದು ಬಿಟ್ಟು ಮಿಕ್ಕ ಎಲ್ಲ ಅಕ್ಕಿ ಕೆ.ಜಿಗೆ 2 ರೂ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2024, 0:08 IST
Last Updated 12 ಫೆಬ್ರುವರಿ 2024, 0:08 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಉತ್ತಮ ವರ್ಗದ್ದು ಬಿಟ್ಟು ಮಿಕ್ಕ ಎಲ್ಲ ಅಕ್ಕಿ ಕೆ.ಜಿಗೆ 2 ರೂ

ಬೆಂಗಳೂರು, ಫೆ. 11– ಉತ್ತಮ ಅಕ್ಕಿ ಹೊರತು ಉಳಿದ ಎಲ್ಲ ವರ್ಗಗಳ ಅಕ್ಕಿಯ ಪರಮಾವಧಿ ಬೆಲೆಯನ್ನು ಸಗಟು ಮಾರಾಟ ಘಟ್ಟದಲ್ಲಿ ಕೆ.ಜಿ ಒಂದಕ್ಕೆ ಎರಡು ರೂಪಾಯಿ ಒಳಗೆ ಇಡಲು ನಗರದ ಸಗಟು ಅಕ್ಕಿ ವರ್ತಕರು ನಿರ್ಣಯ ಮಾಡಿದ್ದಾರೆ. 

ಅಕ್ಕಿ ವ್ಯಾಪಾರವನ್ನು ತಾವು ನಿಲ್ಲಿಸುವುದಾಗಿ ಬಂದ ವರದಿಯನ್ನು ಈ ವರ್ತಕರು ನಿರಾಕರಿಸಿದ್ದಾರೆ. 

ADVERTISEMENT

ಇಂದು ವಿಧಾನಸೌಧದಲ್ಲಿ ಆಹಾರ ಸಚಿವ ಕೆ.ಎಚ್. ಪಾಟೀಲ್ ಅವರೊಡನೆ ವಾಣಿಜ್ಯ ಸಂಘದ ಅಧ್ಯಕ್ಷರು ಹಾಗೂ ಸಗಟು ಅಕ್ಕಿ ವರ್ತಕರ ಸಂಘದ ಸದಸ್ಯರು ಪರಿಸ್ಥಿತಿ ಕುರಿತು ಚರ್ಚೆ ನಡೆಸಿದ ನಂತರ ಸಗಟು ವರ್ತಕರು ಈ ನಿರ್ಣಯ ಅಂಗೀಕರಿಸಿದ್ದಾರೆ. 

ಬೆಳ್ಳಿ ಬೆಲೆ ಅಪಾರ ಏರಿಕೆ

ಮುಂಬೈ, ಫೆ. 11– ಬೆಳ್ಳಿಯ ಬೆಲೆ ಕಿಲೊ ಗ್ರಾಂಗೆ 60 ರೂ.ಗಳಷ್ಟು ಮೇಲಕ್ಕೆ ಪುಟಿಯಿತು. ಬೆಳ್ಳಿಯು ಕಿಲೊ ಗ್ರಾಂಗೆ 1,140 ರೂ.ಗಳ ದಾಖಲೆ ಬೆಲೆಯನ್ನು ಇಂದು ತಲುಪಿತು. 

ಶನಿವಾರವಷ್ಟೇ ಬೆಳ್ಳಿಯ ಬೆಲೆ 73 ರೂ.ಗಳಷ್ಟು ಮೇಲಕ್ಕೆ ಜಿಗಿದಿತ್ತು. ಮಾರಾಟದ ದಿನವಾದ ಇಂದು ಮತ್ತೆ 60 ರೂ. ಏರಿದ್ದು, ಇದು ಅಪರೂಪದ ಬೆಳವಣಿಗೆ ಆಗಿದೆ. ಇದರಿಂದ ಎರಡನೇ ದಿನದಲ್ಲಿ ಬೆಲೆಯು
133 ರೂ. ನಷ್ಟು ಏರಿದಂತಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.