ಮಿತ–ಹಿತ
ಬೆಂಗಳೂರು, ಮೇ 10– ‘ಪ್ರಮಾಣವರಿತು ಮಾತನಾಡಿದರೆ ಒಳ್ಳೆಯದು’
ಈ ಮಾತಿಗೆ ಮುನ್ನ ಮಾಡಿದ್ದ ಪ್ರಾರ್ಥನೆ: ‘ಉತ್ಪ್ರೇಕ್ಷೆ ಬೇಡ’
ಶುಕ್ರವಾರ ವಿಧಾನಸಭೆಯಲ್ಲಿ ಈ ಮನವಿ ಮಾಡಿದವರು ಮುಖ್ಯಮಂತ್ರಿ ಅರಸು ಅವರು.
ಇವರ ಮನವಿ ‘ಲಂಚ ಇದೆ’ ಎಂದು ಎಲ್ಲ ಹೇಳುವ ಮಾತಿಗೆ ಸಂಬಂಧಿಸಿದ್ದು.
‘ಇದರಿಂದ ದೂರ ಯಾರಿದ್ದಾರೆ ಎಂಬುದನ್ನು ಹುಡುಕಬೇಕಾಗುತ್ತದೆ. ಮಾತನಾಡುವವರು ಆದಿಯಾಗಿ ಸಿಕ್ಕಿದ ಕಡೆ ಹೇಳೋ ಧೈರ್ಯ ಇಲ್ಲ. ಸುಮ್ಮನೆ ಮಾತನಾಡಿದರೆ ಕಡಿಮೆ ಆಗುತ್ತೆ. ಒಂದು ಸಮಯ ಸಿಕ್ಕಿದರೆ ಬಲಿ ಹಾಕಿ ಅನ್ನೋರಿಗಿಂತ ಬಿಡಿಸೋರೆ ಹೆಚ್ಚು’– ಲಂಚ ಕಡಿಮೆ ಮಾಡುವ ದೃಷ್ಟಿಯಿಂದಲೂ ಉತ್ಪ್ರೇಕ್ಷಿತ ಮಾತು ಬೇಡವೆಂಬುದೇ ಅವರು ಮಾಡಿದ ಮನವಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.