ADVERTISEMENT

50 ವರ್ಷಗಳ ಹಿಂದೆ | ಮತ್ತೆ ಆರ್ಥಿಕ ಹಿಂಜರಿತ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 23:38 IST
Last Updated 21 ಅಕ್ಟೋಬರ್ 2024, 23:38 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಮತ್ತೆ ಆರ್ಥಿಕ ಹಿಂಜರಿತ: ಉಕ್ಕು ನಿಯಂತ್ರಣ ರದ್ದಾಗುವ ಪರಿಸ್ಥಿತಿ

ಬೆಂಗಳೂರು, ಅ. 21– ಕೇವಲ ಒಂದು ದಶಕದ ಹಿಂದೆ ದೇಶವನ್ನು ಕಾಡಿದ ಆರ್ಥಿಕ ಹಿಂಜರಿತದ ಸಮಸ್ಯೆ ಮತ್ತೆ ಸದ್ಯದಲ್ಲೇ ಮರುಕಳಿಸುವ ಭೀತಿ ಇದೆ. ಅದರ ಮುನ್ಸೂಚನೆ ಈಗಾಗಲೇ ವ್ಯಕ್ತವಾಗಿದ್ದು, ಅಧಿಕ ಬೇಡಿಕೆ ಇದ್ದ ಉಕ್ಕನ್ನು ಅನೇಕ ಸಂಸ್ಥೆಗಳು ಸಾಗಿಸದೆ ಗೋಡೌನ್‌ಗಳಲ್ಲಿ ಅದು ಬೀಳಬೇಕಾದ ಪರಿಸ್ಥಿತಿ ಬಂದಿದೆ.

ಈ ವಿಚಾರವನ್ನು ಭಾರತದ ಕಬ್ಬಿಣ ಮತ್ತು ಉಕ್ಕು ನಿಯಂತ್ರಣಾಧಿಕಾರಿ ಘೋಷ್‌ ಅವರು, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಫೆಡರೇಷನ್ನಿನ ಆಶ್ರಯದಲ್ಲಿ ಇಂದು ನಡೆದ ಹೊಸ ಉಕ್ಕು ನೀತಿಗೆ ಸಂಬಂಧಿಸಿದ ವಿಚಾರ ಸಂಕಿರಣದಲ್ಲಿ ತಿಳಿಸಿದರು.

ADVERTISEMENT

1964– 65ರಲ್ಲಿ ಇದ್ದಂತೆ, ಉಕ್ಕಿನ ಮೇಲಿನ ನಿಯಂತ್ರಣವನ್ನು ರದ್ದು ಮಾಡುವ ಪ್ರಸಂಗ ಬರಬಹುದೆಂದು ಹೇಳಿದರು.

ಭದ್ರಾವತಿ ಉಕ್ಕು ಕಾರ್ಖಾನೆಗೆ 2 ಕೋಟಿ ರೂ. ಲಾಭ

ಬೆಂಗಳೂರು, ಅ. 21– ರಾಜ್ಯ ಸರ್ಕಾರದ ಮಾಲೀಕತ್ವದ ಭದ್ರಾವತಿ ಉಕ್ಕಿನ ಕಾರ್ಖಾನೆ ಈ ವರ್ಷ ಎರಡು ಕೋಟಿ ರೂ. ಲಾಭ ಗಳಿಸಿದೆ ಎಂದು ಕೈಗಾರಿಕೆ ಸಚಿವ ಎಸ್‌.ಎಂ.ಕೃಷ್ಣ ಅವರು ಇಂದು ಇಲ್ಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.