ADVERTISEMENT

50 ವರ್ಷಗಳ ಹಿಂದೆ | ಚುನಾವಣೆ ಆಯೋಗದ ಮೇಲೆ ಲೆಕ್ಕಪತ್ರ ಸಮಿತಿಗೆ ಅಧಿಕಾರ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 0:23 IST
Last Updated 23 ಅಕ್ಟೋಬರ್ 2024, 0:23 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಚಾಚೂ ತಪ್ಪದೆ ಕೃತಿಗಿಳಿಸಿ ವರದಿ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ

ಬೆಂಗಳೂರು, ಅ. 22– ಅಸ್ಪೃಶ್ಯತಾ ನಿವಾರಣಾ ಶಾಸನದ ಸರ್ವ ವಿಧಿಗಳನ್ನು ಚಾಚೂ ತಪ್ಪದೆ, ಜಾರಿಗೆ ತರುವಲ್ಲಿ ತಕ್ಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯು ಎಲ್ಲ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದೆ.

ಶಾಸನದ ವಿಧಿಗಳನ್ನು ಸ್ಪಷ್ಟಪಡಿಸಿ ಅವುಗಳ ಜಾರಿಯಲ್ಲಿ ಅಧಿಕಾರಿಗಳು ತಪ್ಪಿದರೆ ಅದನ್ನು ಉಗ್ರವಾಗಿ ಪರಿಗಣಿಸಲಾಗುವುದು ಎಂದು ಸ್ಪಷ್ಟಪಡಿಸಿರುವ ಸುತ್ತೋಲೆಯು ಕೈಗೊಂಡ ಕ್ರಮಗಳ ಬಗ್ಗೆ ಪ್ರತಿ ತಿಂಗಳು ಸರ್ಕಾರಸ್ಥ ವರದಿ ಕಳುಹಿಸಬೇಕು ಎಂದು ಹೇಳಿದೆ.

ADVERTISEMENT

ಚುನಾವಣೆ ಆಯೋಗದ ಮೇಲೆ ಲೆಕ್ಕಪತ್ರ ಸಮಿತಿಗೆ ಅಧಿಕಾರ

ಮದರಾಸ್, ಅ. 22– ಚುನಾವಣಾ ಆಯೋಗದ ಹಣಕಾಸು ಪರಿಸ್ಥಿತಿಯನ್ನು ಪರಿಶೀಲಿಸಲು ಮತ್ತು ಅದರ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಸಾರ್ವಜನಿಕ ಲೆಕ್ಕಪತ್ರ ಸಮಿತಿಗಳಿಗೆ ಅಧಿಕಾರವಿರಬೇಕು ಎಂದು ಲೋಕಸಭೆಯ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಜ್ಯೋತಿರ‍್ಮಯ ಬಸು ಅವರು ಇಂದು ಸಲಹೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.