ADVERTISEMENT

50 ವರ್ಷಗಳ ಹಿಂದೆ | ಸಮಸ್ಯೆಗಳು ಇತ್ಯರ್ಥವಾಗದಿದ್ದರೆ ಚಳವಳಿ: ಜೆ.ಪಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 23:24 IST
Last Updated 25 ಅಕ್ಟೋಬರ್ 2024, 23:24 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಸಮಸ್ಯೆಗಳು ಇತ್ಯರ್ಥವಾಗದಿದ್ದರೆ ರಾಷ್ಟ್ರದಾದ್ಯಂತ ಚಳವಳಿ: ಜೆ.ಪಿ

ಜಯಪುರ, ಅ. 25– ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಮೊದಲಾದ
ಸಮಸ್ಯೆಗಳನ್ನು ಪ್ರಧಾನಮಂತ್ರಿ ಇಂದಿರಾ ಗಾಂಧಿಯವರು ತತ್‌ಕ್ಷಣ ಪರಿಹರಿಸದೇ ಹೋದಲ್ಲಿ ರಾಷ್ಟ್ರದಾದ್ಯಂತ ಬಿಹಾರ ಮಾದರಿ ಚಳವಳಿ ವ್ಯಾಪಿಸುವುದೆಂದು ಸರ್ವೋದಯ ನಾಯಕ ಜಯಪ್ರಕಾಶ ನಾರಾಯಣ್‌ ಅವರು ಇಂದು ಇಲ್ಲಿ ತಿಳಿಸಿದರು.

ಸರ್ವೋದಯ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಚಳವಳಿ ರಾಷ್ಟ್ರದಾದ್ಯಂತ ಹಬ್ಬುವುದರಲ್ಲಿ ಸಂದೇಹವೇ ಇಲ್ಲವೆಂದು ನುಡಿದರು.

ADVERTISEMENT

ಜೆ.ಪಿ. ಚಳವಳಿ ಹಿಂಸಾಮಾರ್ಗ ಹಿಡಿದರೆ ಉಗ್ರ ಕ್ರಮ; ಗಫೂರ್‌ ಎಚ್ಚರಿಕೆ

ಕಲ್ಕತ್ತ, ಅ. 25– ಸರ್ವೋದಯ ನಾಯಕ ಜಯಪ್ರಕಾಶ ನಾರಾಯಣ್‌ ಅವರು ಹೂಡಿರುವ ಚಳವಳಿ ಹಿಂಸಾರೂಪ ತಾಳಿದರೆ ತಮ್ಮ ಸರ್ಕಾರ ಅದನ್ನು ಹತ್ತಿಕ್ಕಲು ಉಗ್ರ ಕ್ರಮಗಳನ್ನು ಕೈಗೊಳ್ಳುವುದೆಂದು ಬಿಹಾರ ಮುಖ್ಯಮಂತ್ರಿ ಅಬ್ದುಲ್‌ ಗಫೂರ್‌ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಜಯಪ್ರಕಾಶ ನಾರಾಯಣ್‌ ಅವರ ಪರ‍್ಯಾಯ ವಿಧಾನಸಭೆ ಕರೆಯನ್ನು ‘ಇದು ವಿಚಿತ್ರ’ ಎಂದು ವರ್ಣಿಸಿರುವ ಅವರು, ಸರ್ವೋದಯ ಕಾರ್ಯಕರ್ತರು ಈಗಾಗಲೇ ಹಿಂಸಾಕೃತ್ಯಗಳನ್ನು ಆರಂಭಿಸಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.