ಅಧಿಕಗೊಳ್ಳುತ್ತಿರುವ ಸಿ.ಐ.ಎ ಚಟುವಟಿಕೆ;ನಿರಂತರ ಎಚ್ಚರಿಕೆಗೆ ಕರೆ
ನವದೆಹಲಿ, ಅ. 13– ದೇಶದಲ್ಲಿ ‘ಸಿಐಎ’ ಚಟುವಟಿಕೆಗಳು ಅಧಿಕಗೊಂಡಿವೆಯಾದ ಕಾರಣ ನಾವು ನಿರಂತರ ಎಚ್ಚರಿಕೆಯಿಂದಿರಬೇಕೆಂದು ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ
ಗಾಂಧಿ ಅವರು ಇಂದು ಇಲ್ಲಿ ತಿಳಿಸಿದರು.
ಅಮೆರಿಕದ ‘ಸಿಐಎ’ ಸೇರಿದಂತೆ ವಿದೇಶಿ ಗೂಢಚರ ಸಂಸ್ಥೆಗಳ ಚಟುವಟಿಕೆಗಳಿಂದ ಉಂಟಾಗಿರುವ ಅಪಾಯಕಾರಿ ಪರಿಸ್ಥಿತಿಯನ್ನು ಸರ್ಕಾರ ಪರಿಶೀಲಿಸುತ್ತಿದೆಯೆಂದೂ ಕೇಂದ್ರ ಗೃಹಸಚಿವ ಶಾಖೆಗೆ ಸಂಬಂಧಿಸಿದ ಸಂಸತ್ ಸಲಹಾ ಸಮಿತಿಗೆ ತಿಳಿಸಿದರು.
ಅರಮನೆ ಪರಭಾರೆ: ಅಟಾರ್ನಿ ಜನರಲ್ ಅಭಿಪ್ರಾಯಕ್ಕೆ ಕೇಂದ್ರದ ಮನವಿ
ನವದೆಹಲಿ, ಅ. 13– ಮೈಸೂರಿನ ಮಾಜಿ ಮಹಾರಾಜರ ಮೂರು ಅರಮನೆಗಳನ್ನು ಪರಭಾರೆ ಮಾಡಬಾರದೆಂಬ ಷರತ್ತನ್ನು ತೆಗೆದುಹಾಕುವ ಪ್ರಶ್ನೆ ಬಗ್ಗೆ ಕಾನೂನು ತಜ್ಞರ ಭಿನ್ನಾಭಿಪ್ರಾಯವಿರುವುದರಿಂದ, ಈ ಪ್ರಶ್ನೆಯ ಬಗ್ಗೆ ಅಟಾರ್ನಿ ಜನರಲ್ ನಿರೇನ್ ಡೇ ಅವರ ಅಭಿಪ್ರಾಯ ಕೋರಲಾಗಿದೆಯೆಂದು ಪ್ರಧಾನಿಯವರು ಇಂದು ಗೃಹಖಾತೆಗೆ ಸೇರಿದ ಸಮಾಲೋಚನಾ ಸಮಿತಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.