ಮಹಮದಾಲಿಗೆ ಸಾರಿಗೆ: ರಂಗನಾಥ್‌ಗೆ ಸಹಕಾರ
ಬೆಂಗಳೂರು, ಅ. 28– ಹೊಸ ಸಚಿವರಾದ ಮಹಮದಾಲಿ ಅವರಿಗೆ ಸಾರಿಗೆ, ಪ್ರವಾಸೋದ್ಯಮ ಹಾಗೂ ಶ್ರೀಮತಿ ಇವಾ ವಾಜ್ ಅವರಿಗೆ ಆಹಾರ ಹಾಗೂ ಸಾರ್ವಜನಿಕ ಸರಬರಾಜು ಖಾತೆಗಳನ್ನು ಮುಖ್ಯಮಂತ್ರಿ ವಹಿಸಿದ್ದಾರೆ.
ಹೊಸ ಸಚಿವರು ಹಾಗೂ ರಾಜ್ಯ ಸಚಿವರ ನೇಮಕದ ಕಾರಣ ನಡೆದಿರುವ ಖಾತೆಗಳ ಪುನರ್‌ಹಂಚಿಕೆಯಲ್ಲಿ ಸಾರಿಗೆ ಸಚಿವರಾಗಿದ್ದ ಕೆ.ಎಚ್.ರಂಗನಾಥ್ ಅವರು ಸಿ.ಎನ್.ಪಾಟೀಲರಿಂದ ಸಹಕಾರ ಖಾತೆ ಪಡೆದಿದ್ದಾರೆ.
ಸಹಕಾರ ಸಚಿವರಾಗಿದ್ದ ಸಿ.ಎನ್.ಪಾಟೀಲರು ಈಗ ಅರಣ್ಯ ಖಾತೆ ಪಡೆದಿದ್ದಾರೆ.
ಮುಖ್ಯಮಂತ್ರಿ ಅರಸು ಅವರು ತಮಗಿದ್ದ ಕೆಲವು ಖಾತೆಗಳನ್ನು ಇತರರಿಗೆ ಬಿಟ್ಟುಕೊಟ್ಟು ಲೋಕೋಪಯೋಗಿ ಸಚಿವರಿಂದ ವಿದ್ಯುತ್ ಉತ್ಪತ್ತಿ ಖಾತೆಯನ್ನು ತಾವೇ ವಹಿಸಿಕೊಂಡಿದ್ದಾರೆ.
ಗುರಿ ಸಾಧನೆಗಾಗಿ ಶಕ್ತಿ ಮೀರಿ ಸೇವೆ: ಅರಸು
ಬೆಂಗಳೂರು, ಅ. 28– ‘ಅನೇಕ ಮಂದಿ ಯುವಕರು ಸೇರಿ’ ಪುನರ್ ರಚಿತವಾಗಿರುವ ಮಂತ್ರಿಮಂಡಲ ಶಕ್ತಿ ಮೀರಿ ಸೇವೆ ಸಲ್ಲಿಸುವುದರಲ್ಲಿ ಸಹಕಾರ ನೀಡಬೇಕೆಂದು ಮುಖ್ಯಮಂತ್ರಿ ಅರಸು ಅವರು ಕರ್ನಾಟಕದ ಜನತೆಗೆ ಮನವಿ ಮಾಡಿದ್ದಾರೆ.
‘ರಾಜ್ಯದ ಸಾಧ್ಯವಾದಷ್ಟೂ ಪ್ರದೇಶಗಳಿಗೆ ಪ್ರಾತಿನಿಧ್ಯ ನೀಡುವ ಸಾಮರ್ಥ್ಯ ಹಾಗೂ ಅನುಭವಗಳ ಸದುಪಯೋಗ, ನಿರ್ಧಾರ ಕೈಗೊಳ್ಳುವುದು ಹಾಗೂ ರಾಜ್ಯದ ನೀತಿಗಳನ್ನು ಕಾರ್ಯರೂಪಕ್ಕೆ ತರುವುದರಲ್ಲಿ ಸ್ಪಷ್ಟ ಉದ್ದೇಶ ಹಾಗೂ ವೇಗ ಒದಗಿಸುವ ಉದ್ದೇಶದಿಂದ ಕರ್ನಾಟಕ ಮಂತ್ರಿಮಂಡಲದ ವಿಸ್ತರಣೆ ಹಾಗೂ ಪುನರ್‌ರಚನೆ ಕಾರ್ಯವನ್ನು ಕೈಗೊಳ್ಳಲಾಗಿದೆ’ ಎಂದು ಮುಖ್ಯಮಂತ್ರಿಗಳು ಸಂಜೆ ವರದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.