ಚುನಾವಣಾ ವ್ಯವಸ್ಥೆ ಸುಧಾರಣೆ ಆಗದಿದ್ದರೆ ಸಂಸತ್ತಿಗೆ ಘೇರಾವ್
ಲೂದಿಯಾನ, ಅ.30– ಕೇಂದ್ರ ಸರ್ಕಾರವು ಚುನಾವಣಾ ವ್ಯವಸ್ಥೆ ಸುಧಾರಣೆಗಳನ್ನು ಜಾರಿಗೆ ತರದೇ ಹೋದರೆ ಸಂಸತ್ತಿಗೆ ಘೇರಾವ್ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಸರ್ವೋದಯ ನಾಯಕ ಜಯಪ್ರಕಾಶ ನಾರಾಯಣ್ ಅವರು ಇಂದು ಬೆದರಿಕೆ ಹಾಕಿದ್ದಾರೆ.
ಸಂಸತ್ತನ್ನು ಘೇರಾವ್ ಮಾಡಲು ಅವರು ಕಾಲ ನಿಗದಿಪಡಿಸಿಲ್ಲವಾದರೂ ಅದು ಚುನಾವಣಾ ಸುಧಾರಣಾ ಸಮಿತಿಯ ವರದಿ ಸಲ್ಲಿಕೆ ಮೆಲೆ ಅವಲಂಬಿಸಿದೆ ಎಂದಿದ್ದಾರೆ.
ಬಾವದ ಬದಲು ಚಮತ್ಕಾರ ಸಂಗೀತ ವಿದುಷಿ ಆತಂಕ
ಬೆಂಗಳೂರು, ಅ. 30– ‘ಕಲಾವಿದ ಆಳವಾದ ಅಭ್ಯಾಸದಿಂದ ತನ್ನ ಸಹಜ ಪ್ರತಿಭೆ ವಿಕಾಸವಾಗಲು ಶ್ರಮಿಸುತ್ತಿಲ್ಲ, ಶ್ರೋತೃ ಅಲ್ಪ ತೃಪ್ತ’ ಸಂಗೀತ ಕ್ಷೇತ್ರದಲ್ಲಿ ಈ ಪ್ರವೃತ್ತಿಯಿಂದ ಹಿರಿಯ ಸಂಗೀತ ವಿದುಷಿ ಶ್ರೀಮತಿ ಜಿ.ಚನ್ನಮ್ಮನವರೆಗೆ ಆತಂಕ.
‘ಸಾವಿರಾರು ವರ್ಷಗಳಿಂದ ಸಾವಿರಾರು ಪ್ರತಿಭಾವಂತ ಕಲಾವಿದರ ಶ್ರಮ ಹಾಗೂ ಕಲ್ಪನೆಯಿಂದ ರೂಪಿತವಾದ ಈ ಭವ್ಯ ಸಂಗೀತ ಕಟ್ಟಡವು ಶಿಥಿಲವಾಗದಂತೆ ನೋಡಿಕೊಳ್ಳಬೇಕೆಂದು ಬೆಂಗಳೂರು ಗಾಯನ ಸಮಾಜದ ಆಯ್ರಯದಲ್ಲಿ ಆರನೆಯ ಸಂಗೀತ ಸಮ್ಮೇಳನದ ಅಧ್ಯಕ್ಷರಾಗಿ ಇಂದು ಕರೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.