ಮನೆ ದೂಳು ಉಬ್ಬಸಕ್ಕೆ ಮೂಲ
ನವದೆಹಲಿ, ನ. 10– ಮನೆಯಲ್ಲಿ ದೂಳು ಸೇರಿದರೆ ಅಪಾಯ. ಅನೇಕರಿಗೆ ದೂಳು ಒಗ್ಗದೇ ಉಬ್ಬಸ ಬರುವುದುಂಟು. ಉಬ್ಬಸದಿಂದ ಪಾರಾಗಲು ಮನೆಯಲ್ಲಿ ದೂಳು ಸೇರದಂತೆ ನೋಡಿಕೊಳ್ಳಬೇಕು.
–ಉಬ್ಬಸ ಮತ್ತು ಶ್ವಾಸನಾಳಗಳ ಉರಿಯೂತ (ಬ್ರಾಂಕೈಟಿಸ್) ಕುರಿತ ವಿಶ್ವ ಸಮ್ಮೇಳನದಲ್ಲಿ ಭಾರತ, ಬ್ರಿಟನ್, ಥಾಯ್ಲೆಂಡ್ ಮತ್ತು ಹಾಂಗ್‌ಕಾಂಗ್‌ನ ವೈದ್ಯ ವಿಜ್ಞಾನಿಗಳು ಈ ಅಂಶವನ್ನು ಒತ್ತಿ ಹೇಳಿದರು.
ದೂಳಿನಲ್ಲಿ ಇರುವ ಡಿ. ಟರೋನಿಸಿನಿಸ್, ಡಿ.ಫಾರ‍್ನೇ ಎಂಬ ಎರಡು ಬಗೆಯ ಸೂಕ್ಷ್ಮ ಕಣಗಳು ಉಬ್ಬಸವನ್ನು ಕೆರಳಿಸುತ್ತವೆ ಎಂದು ಬ್ರಿಟನ್ನಿನ ಡಾ. ಡಿ.ಜಿ. ರೈತ್ ಹೇಳಿದರು.
ಪ್ರಧಾನಿ ಜತೆ ಚರ್ಚಿಸಿದ ವರದಿ ನಿಜವಲ್ಲ: ಅರಸು
ಬೆಂಗಳೂರು, ನ. 10– ಕರ್ನಾಟಕ ಮಂತ್ರಿ ಮಂಡಲವನ್ನು ಇನ್ನಷ್ಟು ವಿಸ್ತರಿಸುವ ಸಂಬಂಧದಲ್ಲಿ ತಾವು, ನಿನ್ನೆ ಪ್ರಧಾನಿ ಅವರೊಡನೆ ಮಾತುಕತೆ ನಡೆಸಿದುದಾಗಿ ಪತ್ರಿಕೆಗಳಲ್ಲಿ ಬಂದಿರುವ ವರದಿಗಳನ್ನು ಮುಖ್ಯಮಂತ್ರಿ ಶ್ರೀ ದೇವರಾಜ ಅರಸು ಅವರು ನಿರಾಕರಿಸಿದ್ದಾರೆ.
‘ಪ್ರಧಾನಿ ಜತೆ ನಾನೇನೂ ಮಾತನಾಡಿಲ್ಲ’ ಎಂದು, ಬೆಳಿಗ್ಗೆ ದೆಹಲಿಯಿಂದ ಮರಳಿದ ಶ್ರೀ ಅರಸು ಅವರು, ಮನೆಯಲ್ಲಿ ಭೇಟಿಯಾದ ವರದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.