ರಾ.ಶಿ., ಪರಮೇಶ್ವರ ಭಟ್ಟ, ಅಗರಂಗೆ ರಾಜ್ಯೋತ್ಸವ ಪ್ರಶಸ್ತಿ
ಬೆಂಗಳೂರು, ಅ. 29– ವಿವಿಧ ಕ್ರಿಯಾ ಕ್ಷೇತ್ರಗಳಲ್ಲಿ ಅಪೂರ್ವ ಸೇವೆ ಸಲ್ಲಿಸಿದ ಹತ್ತು ಮಂದಿ ರಾಜ್ಯೋತ್ಸವ ಪ್ರಶಸ್ತಿಗಾಗಿ ಆಯ್ಕೆಗೊಂಡಿದ್ದಾರೆ.
ಅಗರಂ ರಂಗಯ್ಯ (ಪತ್ರಕರ್ತ), ಎಂ.ಆರ್. ಆರ್ಯ (ಎಂಜಿನಿಯರ್), ಕೆ.ಸಿ. ನಾಯಕ್ (ಕೃಷಿ ಕ್ಷೇತ್ರ ವಿಜ್ಞಾನಿ), ಬಿ.ವಿ. ನಾರಾಯಣರೆಡ್ಡಿ (ಅರ್ಥಶಾಸ್ತ್ರಜ್ಞ), ಎನ್. ಪದ್ಮಾವತಿಬಾಯಿ (ಸಮಾಜಸೇವೆ), ಎಸ್.ವಿ. ಪರಮೇಶ್ವರ ಭಟ್ಟ (ಸಾಹಿತ್ಯ, ಶಿಕ್ಷಣ), ರಹಮತ್ ಬೇಗ್ (ಸಮಾಜಸೇವೆ), ಡಾ. ಬಿ.ಪಿ. ರಾಧಾಕೃಷ್ಣ (ಗಣಿ ಹಾಗೂ ಭೂಗರ್ಭಶಾಸ್ತ್ರ), ಎ.ಎನ್. ವರದರಾಜುಲು (ಸಮಾಜಸೇವೆ), ಡಾ. ಎಂ. ಶಿವರಾಮ (ನಗೆಬರಹಗಾರ ಮತ್ತು ‘ಕೊರವಂಜಿ’ಯ ರಾ.ಶಿ.).
ಸರ್ಕಾರಿ ನೌಕರರಿಗೆ 14ರಿಂದ 54 ರೂ. ಹೆಚ್ಚು ಭತ್ಯೆ
ಬೆಂಗಳೂರು, ಅ. 29– ಕರ್ನಾಟಕ ಸರ್ಕಾರದ ಮತ್ತು ಸ್ಥಳೀಯ ಸಂಸ್ಥೆಗಳ
3.6 ಲಕ್ಷ ಮಂದಿ ನೌಕರರು ಅಕ್ಟೋಬರ್ ತಿಂಗಳ ವೇತನದಿಂದ ಅನ್ವಯವಾಗುವಂತೆ 14ರಿಂದ 54 ರೂಪಾಯಿಗಳವರೆಗೆ ಹೆಚ್ಚು ತುಟ್ಟಿಭತ್ಯೆ ಪಡೆಯುವರು.
ಆದರೆ ಕೇಂದ್ರ ಸರ್ಕಾರದ ಈಚಿನ ಕಡ್ಡಾಯ ಠೇವಣಿ ಶಾಸನದ ಪ್ರಕಾರ
ಏರಿದ ಭತ್ಯೆಯ ಅರ್ಧ ಮಾತ್ರ ನೌಕರರಿಗೆ ಬರುತ್ತದೆ. ಉಳಿದ ಅರ್ಧ ಮೊತ್ತ,
ಮುಂದೆ ಪಡೆಯಲು ಅವಕಾಶವಾಗುವಂತೆ ರಿಸರ್ವ್ ಬ್ಯಾಂಕ್‌ಗೆ ಠೇವಣಿ ರೂಪದಲ್ಲಿ ಹೋಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.