ADVERTISEMENT

50 ವರ್ಷಗಳ ಹಿಂದೆ | ಮಂಗಳವಾರ, 11–8–1970

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 19:30 IST
Last Updated 10 ಆಗಸ್ಟ್ 2020, 19:30 IST
   

ಮುಖ್ಯಮಂತ್ರಿಗಳು ಸಭೆ ಸೇರಲು ಇದು ಸಕಾಲವಲ್ಲ: ಮೈಸೂರಿನ ನಿಲುವು
ಬೆಂಗಳೂರು, ಆ. 10–
ಕಪಿಲಾ ಮತ್ತು ಹೇಮಾವತಿ ಯೋಜನೆಗಳಿಗೆ ಮಂಜೂರಾತಿ ನೀಡುವ ಬಗ್ಗೆ ಅಂತ್ಯ ಮಾತುಕತೆಗಾಗಿ ‘ಸಾಧ್ಯವಾದಷ್ಟು ಬೇಗ’ ಸಂಬಂಧಪಟ್ಟ ಮುಖ್ಯಮಂತ್ರಿಗಳ ಸಭೆ ನಡೆಯಬೇಕೆಂದು ಸಲಹೆ ಮಾಡಿ ಕೇಂದ್ರದ ನೀರಾವರಿ ಮತ್ತು ವಿದ್ಯುಚ್ಛಕ್ತಿ ಸ್ಟೇಟ್‌ ಸಚಿವ ಡಾ. ಕೆ.ಎಲ್‌.ರಾವ್‌ರವರು ಇಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರಿಗೆ ಪತ್ರ ಬರೆದಿದ್ದಾರೆ.

ಮುಖ್ಯಮಂತ್ರಿಗಳ ಸಭೆಗೆ ಇದು ಸಕಾಲವಲ್ಲವೆಂದೂ ಅಂತಹ ಸಭೆಯಿಂದ ಉದ್ದೇಶ ಸಾಧನೆಯಾಗುವುದಿಲ್ಲವೆಂದೂ ಡಾ. ರಾವ್‌ರವರಿಗೆ ಶ್ರೀ ಪಾಟೀಲರು ಪತ್ರ ಬರೆಯಲಿದ್ದಾರೆ.

ಸುಲಭ ಬೆಲೆ ಕಾರು ತಯಾರಿಕೆಗೆ ಸರ್ಕಾರಿ ಕಾರ್ಖಾನೆ: ವಿದೇಶಿ ನೆರವು
ನವದೆಹಲಿ, ಆ. 10–
ವಿದೇಶಿ ಸಹಕಾರದೊಡನೆ ಸರ್ಕಾರಿ ಕ್ಷೇತ್ರದಲ್ಲಿ ಅಗ್ಗದ ಬೆಲೆಯ ಕಾರು ತಯಾರಿಕೆ ಕಾರ್ಖಾನೆಯೊಂದನ್ನು ಸ್ಥಾಪಿಸಲಾಗುವುದೆಂದು ಇಂದು ಸಂಸತ್ತಿನಲ್ಲಿ ಅಧಿಕೃತವಾಗಿ ಪ್ರಕಟಿಸಲಾಯಿತು.

ADVERTISEMENT

ಈ ಕಾರ್ಖಾನೆಯಲ್ಲಿ ವರ್ಷಕ್ಕೆ 50,000 ಅಗ್ಗದ ಬೆಲೆಯ ಕಾರುಗಳನ್ನು ತಯಾರಿಸುವ ನಿರೀಕ್ಷೆಯಿದೆ. ಇದರಿಂದ, ಸಣ್ಣ ಕಾರು ತಯಾರಿಕೆಯಲ್ಲಿ ತಲೆದೋರಿದ್ದ ಹತ್ತು ವರ್ಷಗಳ ಅನಿಶ್ಚಿತ ಪರಿಸ್ಥಿತಿ ನಿವಾರಣೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.