ನವದೆಹಲಿ, ನ. 26– ಸ್ಫೋಟಕ ವಸ್ತುವಿದ್ದ ಸೀಸೆ ಮತ್ತು ಚೂರಿ ಸಹಿತ ಪ್ರೇಕ್ಷಕರ ಗ್ಯಾಲರಿಯನ್ನು ಪ್ರವೇಶಿಸಲು ಯತ್ನಿಸಿದ 24 ವರ್ಷದ ಯುವಕನಿಗೆ ಲೋಕಸಭೆ ಇಂದು ಡಿಸೆಂಬರ್ 20ರವರೆಗೆ ಕಠಿಣ ಶಿಕ್ಷೆ ವಿಧಿಸಿತು.
ಯುವಕನ ಹೆಸರು ಇಂದ್ರಜಿತ್ ಸಿಂಗ್. ಲೋಕಸಭೆಯ ಕಾವಲು ಸಿಬ್ಬಂದಿ ಈ ದಿನ ಮಧ್ಯಾಹ್ನ 12.25ರಲ್ಲಿ ಆತನನ್ನು ಬಂಧಿಸಿತು. ಆತ ಪ‍್ರೇಕ್ಷಕರ ಗ್ಯಾಲರಿ ಪ್ರವೇಶಿಸಲು ಕಾಯುತ್ತಿದ್ದ.
ಯುವಕನಿಗೆ ಶಿಕ್ಷೆ ವಿಧಿಸುವ ನಿರ್ಣಯವನ್ನು ಸಂಸದೀಯ ವ್ಯವಹಾರಗಳ ಸಚಿವ ರಘುರಾಮಯ್ಯ ಅವರು ಮಂಡಿಸಿದರು.
ಬೆಂಗಳೂರು, ನ. 26– ‘ಹಣ, ಹೆಂಡಕ್ಕಾಗಿ ತಮ್ಮ ಪವಿತ್ರವಾದ ಮತಗಳನ್ನು ಮಾರಿಕೊಳ್ಳ
ದಂತೆ, ಸ್ವಾರ್ಥ ಸಾಧಕರು ಹಾಗೂ ಭ್ರಷ್ಟರಿಗೆ ಮತ ಕೊಡದಿರುವಂತೆ’ ಜನಸಾಮಾನ್ಯರಲ್ಲಿ ತೀವ್ರ ಪ್ರಚಾರ ನಡೆಸುವ ಉದ್ದೇಶದಿಂದ ಸಂಸ್ಥೆಯೊಂದು ಅಸ್ತಿತ್ವಕ್ಕೆ ಬಂದಿದೆ.
ಕಳೆದ 24ರಂದು ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪನವರ ಮನೆಯಲ್ಲಿ ನಡೆದ ಸಭೆಯೊಂದರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲು ನಿರ್ಧಾರ ಕೈಗೊಳ್ಳಲಾಯಿತು.
ಕಡಿದಾಳ್ ಮಂಜಪ್ಪನವರ ಪ್ರಧಾನ ಸಂಚಾಲಕತ್ವದಲ್ಲಿ ಮುಂದಿನ ಕಾರ‍್ಯಕ್ರಮ ರೂಪಿಸಲು ತಾತ್ಕಾಲಿಕ ಸಮಿತಿಯೊಂದನ್ನು ರಚಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.