ADVERTISEMENT

50 ವರ್ಷದ ಹಿಂದೆ: ಹರಿಜನ, ಗಿರಿಜನರ ರಕ್ಷಣೆಗೆ ರಾಜ್ಯದಲ್ಲಿ ಪ್ರತ್ಯೇಕ ಪೊಲೀಸ್ ಘಟಕ

ಪ್ರಜಾವಾಣಿ ವಿಶೇಷ
Published 13 ಜೂನ್ 2024, 23:45 IST
Last Updated 13 ಜೂನ್ 2024, 23:45 IST
50 ವರ್ಷಗಳ ಹಿಂದೆ..
50 ವರ್ಷಗಳ ಹಿಂದೆ..   

ಬಳ್ಳಾರಿ–ಹೊಸಪೇಟೆ ಪ್ರದೇಶದಲ್ಲಿ ಕಬ್ಬಿಣ ಅದಿರು ನಿಕ್ಷೇಪ ವೃದ್ಧಿ ಯೋಜನೆ ಬಗ್ಗೆ ಸಮಿತಿ ನೇಮಕ

ನವದೆಹಲಿ, ಜೂನ್ 13– ಕರ್ನಾಟಕದ ಬಳ್ಳಾರಿ–ಹೊಸಪೇಟೆ ಪ್ರದೇಶದಲ್ಲಿರುವ ಕಬ್ಬಿಣದ ಅದಿರು ನಿಕ್ಷೇಪದ ಅಭಿವೃದ್ಧಿ ಯೋಜನೆ ಬಗ್ಗೆ ಅಧ್ಯಯನ ನಡೆಸಿ ಸಲಹೆ ನೀಡಲು ಕಬ್ಬಿಣ ಅದಿರು ಮಂಡಳಿ ಸಮಿತಿಯೊಂದನ್ನು ರಚಿಸಿದೆ.

ನಿಕ್ಷೇಪವನ್ನು ಹೊರತೆಗೆಯಲು ಕೈಗೊಳ್ಳುವ ನಾನಾ ವಿಧಾನಗಳಿಗೆ ಬೇಕಾಗುವ ಬಂಡವಾಳ ಹಾಗೂ ಆ ಪ್ರದೇಶದಲ್ಲಿ ಉದ್ಯೋಗ ನೀಡಿಕೆ ಅವಕಾಶವನ್ನು ಹೆಚ್ಚಿಸುವ ಅಗತ್ಯ– ಈ ಹಿನ್ನೆಲೆಯಲ್ಲಿ, ಸಮಿತಿಯು ಉತ್ಪಾದನೆ ಕುರಿತು ಯೋಜನೆಯನ್ನು ರೂಪಿಸಲಿದೆ.

ಹರಿಜನ, ಗಿರಿಜನರ ರಕ್ಷಣೆಗೆ ರಾಜ್ಯದಲ್ಲಿ ಪ್ರತ್ಯೇಕ ಪೊಲೀಸ್ ಘಟಕ

ಬೆಂಗಳೂರು, ಜೂನ್ 13– ರಾಜ್ಯದಲ್ಲಿ ಹರಿಜನ, ಗಿರಿಜನರ ಹಕ್ಕುಬಾಧ್ಯತೆಗಳನ್ನು
ರಕ್ಷಿಸಲು ಸರ್ಕಾರ ಪ್ರತ್ಯೇಕ ಪೊಲೀಸ್ ಘಟಕವೊಂದನ್ನು ಶೀಘ್ರದಲ್ಲಿಯೇ ಸ್ಥಾಪಿಸಲು ಪರಿಶೀಲಿಸುತ್ತಿದೆ.

ADVERTISEMENT

ಸಮಾಜ ಕಲ್ಯಾಣ ಸಚಿವ ಎನ್. ರಾಚಯ್ಯ ಈ ವಿಷಯವನ್ನು ಸುದ್ದಿಗಾರರಿಗೆ ಪ್ರಕಟಿಸಿ, ಆ ಘಟಕವು ಪೊಲೀಸ್ ಸೂಪರಿಂಟೆಂಡೆಂಟ್ ಒಬ್ಬರನ್ನು ಮುಖ್ಯಾಧಿಕಾರಿಯನ್ನಾಗಿ ಪಡೆಯಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.