ಚಿಕ್ಕಮಗಳೂರು, ಸೆ. 16– ಇಲ್ಲಿಯ ಕ್ರೈಸ್ತ ಕಾಲೊನಿಯಲ್ಲಿ ಅಲ್ಲಿಯ ನಿವಾಸಿಯೊಬ್ಬರು ಇಂದು ಬೆಳಿಗ್ಗೆ ಮುಖ ತೊಳೆಯಲು ನಲ್ಲಿ ತಿರುಗಿಸಿದಾಗ ನಾಗರ ಹಾವನ್ನು ಹೋಲುವ 11 ಅಂಗುಲದ ಜೀವಿಯೊಂದು ಕೆಳಗೆ ಬಿತ್ತೆಂದು ಗೊತ್ತಾಗಿದೆ.
ಅದನ್ನು ಒಂದು ಸೀಸೆಯಲ್ಲಿ ಹಾಕಿ ಜಿಲ್ಲಾಧಿಕಾರಿ ಕಚೇರಿಗೆ ಅವರು ಕಳುಹಿಸಿದರು. ಈ ಮಧ್ಯೆ ಪುರಸಭೆಯ ಕಾರ್ಯನಿರ್ವಹಣಾ ಅಧಿಕಾರಿ ನಾರಾಯಣ್, ಪತ್ರಕರ್ತರನ್ನು ನೀರು ಶುದ್ಧೀಕರಣ ಮಾಡುವ ಸ್ಥಳಕ್ಕೆ ಕರೆದೊಯ್ದು, ಜೀವಂತ ಪ್ರಾಣಿಗಳಾವುವೂ ಶುದ್ಧೀಕರಣ ಮಾಡಿದ ಜಲಾಶಯದೊಳಕ್ಕೆ ಹೋಗಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿದರು. ಪೈಪ್‌ನಲ್ಲಿ ನೀರು ಸೋರುವ ಕಡೆ ಎಲ್ಲೋ ಅದು ಒಳಹೊಕ್ಕಿರಬಹುದೆಂದು ಊಹಿಸಲಾಗಿದೆ. ಸಣ್ಣ ನಾಗರಹಾವು ಅಥವಾ ಲಾಡಿ ಹುಳದಂತಿರುವ ಈ ಜೀವಿ ಬಹಳ ಅಪರೂಪವೆಂದು ಹೇಳಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.