ನವದೆಹಲಿ, ಸೆ. 17– ಮುಂಗಾರು ಫಸಲಿಗೆ ಸಂಗ್ರಹಣೆ ಬೆಲೆ ಮತ್ತು ಸಂಗ್ರಹಣೆ ವಿಧಾನಗಳ ಬಗ್ಗೆ ನಿರ್ಧಾರ ಕೈಗೊಳ್ಳುವುದನ್ನು ಕೇಂದ್ರ ಸರ್ಕಾರ ಒಂದು ವಾರ ಮುಂದಕ್ಕೆ ಹಾಕಿದೆ.
ಧಾನ್ಯ ಸಂಗ್ರಹಣೆ ಬೆಲೆ ನಿಗದಿ ಕುರಿತು ಇನ್ನೂ ಯಾವುದೇ ಖಚಿತ ನಿರ್ಧಾರಕ್ಕೆ ಬರುವುದು ಸಾಧ್ಯವಾಗದೇ ಹೋದರೂ ಈಗಿನ ಸೂಚನೆ ಪ್ರಕಾರ, ಭತ್ತದ ಸಂಗ್ರಹಣಾ ಬೆಲೆ ಕ್ವಿಂಟಲ್‌ಗೆ 80ರಿಂದ 85 ರೂಪಾಯಿಗಳ ಅಂತರದಲ್ಲಿರಬಹುದು.
ನವದೆಹಲಿ, ಸೆ. 17– ಪೆಟ್ರೋಲ್ ಮತ್ತು ಹೈಸ್ಪೀಡ್ ಡೀಸೆಲ್ ಚಿಲ್ಲರೆ ಮಾರಾಟ ಬೆಲೆ ನಾಳೆಯಿಂದ ಲೀಟರ್‌ಗೆ ಆರು ಪೈಸೆಯಷ್ಟು ಹೆಚ್ಚಾಗುವುದು.
ಸೀಮೆಎಣ್ಣೆ ಮತ್ತು ಲೈಟ್ ಡೀಸೆಲ್ ಬೆಲೆಗಳೂ ಚಿಲ್ಲರೆ ಮಾರಾಟದಲ್ಲಿ ಲೀಟರಿಗೆ 5 ಪೈಸೆಯಷ್ಟು ಹೆಚ್ಚುವುದು ಎಂದು ಇಂದು ರಾತ್ರಿ ಅಧಿಕೃತವಾಗಿ ಪ್ರಕಟಿಸಲಾಯಿತು.
ಅಡುಗೆ ಅನಿಲದ 15 ಕೆ.ಜಿ. ಸಿಲಿಂಡರಿನ ಬೆಲೆಯನ್ನು 1.04 ಪೈಸೆಯಷ್ಟು ಹೆಚ್ಚಿಸಲಾಗಿದೆ.
ನವದೆಹಲಿ, ಸೆ. 17– ಏರುತ್ತಿರುವ ರಸಗೊಬ್ಬರದ ಬೆಲೆಗಳನ್ನು ಅನುಸರಿಸಿ, ರೈತರಿಗೆ ನೀಡುವ ಸಾಲ ಸೌಲಭ್ಯಗಳ ಪ್ರಮಾಣವನ್ನೂ ಅಧಿಕಗೊಳಿಸಬೇಕೆಂದು ಕೇಂದ್ರ ಸರ್ಕಾರವು ಎಲ್ಲ ರಾಜ್ಯ
ಸರ್ಕಾರಗಳಿಗೆ ಪತ್ರ ಬರೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.