ಬೆಂಗಳೂರು, ಸೆ. 18– ಕಳ್ಳ ಸಾಗಾಣಿಕೆ ವ್ಯವಹಾರದ ‘ದೊರೆ’ ಎನ್ನಲಾದ ಹಾಜೀ ಮಸ್ತಾನಾ ಮಿರ್ಜಾ ಎಂಬುವನನ್ನು ನಗರದ ಪೊಲೀಸರು ಬುಧವಾರ ಬೆಳಗಿನ ಜಾವ ಇಲ್ಲಿ ಬಂಧಿಸಿದರು.
ಕಳ್ಳ ಸಾಗಾಣಿಕೆ ವ್ಯವಹಾರದ ಪ್ರಕರಣಗಳಲ್ಲಿ ತಮಗೆ ಬೇಕಾಗಿದ್ದಾನೆ ಎಂದು ಮುಂಬಯಿ ಪೊಲೀಸ್ ಕಮೀಷನರರು ನೀಡುದ ವಿವರಗಳ ಮೇಲೆ ಆಂತರಿಕ ಭದ್ರತಾ ಶಾಸನದನ್ವಯ ಕಳ್ಳ ಸಾಗಾಣೆದಾರರನ್ನು ಸ್ಥಾನಬದ್ಧತೆಯಲ್ಲಿಡಲು ಸಾಧ್ಯವಾಗುವಂತೆ ರಾಷ್ಟ್ರಪತಿಗಳು ಹೊರಡಿಸಿದ ಸುಗ್ರೀವಾಜ್ಞೆಯ ರೀತ್ಯ ನಗರದ ಪೊಲೀಸರು ಹಾಜೀ ಮಸ್ತಾನಾ ಅವರನ್ನು ರಿಚ್ ಮಂಡ್ ಟೌನಿನ ಅದ್ಧೂರಿಯ ಮನೆಯಲ್ಲಿ ಬಂಧಿಸಿದರು.
ಬೆಂಗಳೂರು, ಸೆ. 18– ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ಅರಿತು ಅವನ್ನು ಪರಿಹರಿಸುವ ಕಾರ್ಯವನ್ನು ರಾಜ್ಯ ಸರ್ಕಾರ ಆರಂಭಿಸಿ ಹೊಸಹೆಜ್ಜೆಯನ್ನಿಟ್ಟಿದೆ.
ಮುಖ್ಯಕಾರ್ಯದರ್ಶಿ ಶ್ರೀ ಜಿ. ವಿ. ಕೆ. ರಾವ್ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ಆಗಾಗ್ಗೆ ನಡೆಯುತ್ತಿದ್ದು ಪ್ರತಿವಾರ ಕೈಗೊಳ್ಳುವ ಕ್ರಮಗಳ ಬಗ್ಗೆ ವರದಿ ತರಿಸಿಕೊಳ್ಳಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.