ADVERTISEMENT

50 ವರ್ಷಗಳ ಹಿಂದೆ: ತಲೆಮರೆಸಿಕೊಂಡಿರುವ ಕಳ್ಳಸಾಗಣೆ ದೊರೆ ಯೂಸುಫ್‌ ಪಟೇಲ್‌

ಪ್ರಜಾವಾಣಿ ವಿಶೇಷ
Published 20 ಸೆಪ್ಟೆಂಬರ್ 2024, 22:57 IST
Last Updated 20 ಸೆಪ್ಟೆಂಬರ್ 2024, 22:57 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ರಾಜ್ಯದಲ್ಲಿ ಶೇ 30ರಷ್ಟು ಹೈಟೆನ್ಷನ್‌ ವಿದ್ಯುತ್‌ ಖೋತಾ ರದ್ದು

ಬೆಂಗಳೂರು, ಸೆ. 20– ಕಳೆದ ಮೂರು ವಾರಗಳಿಂದ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಮಳೆಯ ದರ್ಶನವಿಲ್ಲದ ಪರಿಣಾಮವಾಗಿ, ಶೇಕಡ 30ರಷ್ಟಿರುವ ಹೈಟೆನ್ಷನ್‌ ವಿದ್ಯುತ್‌ ಖೋತಾ ಕಳೆದ ವರ್ಷದ ಮಟ್ಟಕ್ಕೆ ಇಳಿಯುವ ಸಾಧ್ಯತೆ ಸಂಪೂರ್ಣವಾಗಿ ಮಾಯವಾದಂತಾಗಿದೆ.

ಕಳೆದ ಹತ್ತರಂದು ಖೋತಾವನ್ನು ಶೇಕಡ 40ರಿಂದ 30ಕ್ಕೆ ಇಳಿಸುವಾಗ, ನೀರಿನಮಟ್ಟ ಕಳೆದ ವರ್ಷದ ಅದೇ ದಿನದ ಮಟ್ಟಕ್ಕಿಂತ ಒಂದು ಅಡಿ ಹೆಚ್ಚಾಗಿದ್ದರೆ, ಇಂದಿನ ಮಟ್ಟ ಕಳೆದ ವರ್ಷಕ್ಕಿಂತ 2.65 ಅಡಿಗಳಷ್ಟು ಕಡಿಮೆಯಾಗಿದೆ.

ತಲೆಮರೆಸಿಕೊಂಡಿರುವ ಕಳ್ಳಸಾಗಣೆ ದೊರೆ ಯೂಸುಫ್‌ ಪಟೇಲ್‌

ಮುಂಬಯಿ, ಸೆ. 20– ರಾಷ್ಟ್ರದ ಮೂವರು ಕಳ್ಳಸಾಗಣೆ ದೊರೆಗಳಲ್ಲಿ ಒಬ್ಬನಾದ ಯೂಸುಫ್‌ ಪಟೇಲ್‌ ತಲೆತಪ್ಪಿಸಿಕೊಂಡಿರುವನೆಂದು ನಂಬಲಾಗಿದೆ.

ADVERTISEMENT

ಇತರ ನಾಲ್ವರು ಕುಖ್ಯಾತ ಕಳ್ಳಸಾಗಣೆದಾರರು ಮತ್ತು ಅವರ ಅನೇಕ ಸಹಾಯಕರು ಮುಂಬಯಿ ಪೊಲೀಸರಿಗೆ ಬೇಕಾಗಿದ್ದು, ಈಗ ಅವರೆಲ್ಲ ತಲೆಮರೆಸಿಕೊಂಡಿರುವರೆಂದು ಅಧಿಕೃತ ಮೂಲಗಳು ಶಂಕೆ ವ್ಯಕ್ತಪಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.